sportsmail
ಕ್ರೀಡೆ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮ ಪಡಿಸಬೇಕು, ಕ್ರೀಡೆ ನಮ್ಮ ನಡುವಿನ ಸೌಹಾರ್ಧತೆಯನ್ನು ಕಾಪಾಡಬೇಕು, ಕ್ರೀಡೆ ನಮ್ಮ ನಡುವಿನ ವೈರತ್ವನ್ನು ದೂರ ಮಾಡಬೇಕು. ಈ ಮೌಲ್ಯಗಳನ್ನೇ ಆದರ್ಶವಾಗಿಟ್ಟುಕೊಂಡು ಪಡುಬಿದ್ರಿಯ ರಿಯಾಜ್ ಪಡುಬಿದ್ರಿ, ವರುಣ್ ಪಡುಬಿದ್ರಿ ಹಾಗೂ ನೊಜನ್ ಅವರು 08-1-2022ರಂದು ಆರ್.ವಿ.ಎನ್. ಕ್ರಿಕೆಟರ್ಸ್ ವತಿಯಿಂದ ಉಡುಪಿ ಜಿಲ್ಲೆಯ ಪಡುಬಿದ್ರಿಯ ಅಬ್ಬಾಸ್‌ಗುಡ್ಡೆ ಅಂಗಣದಲ್ಲಿ ಉಡುಪಿ ಜಿಲ್ಲಾ ಮಟ್ಟದ ಸೌಹಾರ್ಧ ಟ್ರೋಫಿ ಹೊನಲು ಬೆಳಕಿನ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಿದ್ದಾರೆ. ಜನವರಿ 1ರಂದು ನಡೆಯಬೇಕಾಗಿದ್ದ ಟೂರ್ನಿಯನ್ನು ನೈಟ್ ಕರ್ಫ್ಯೂ ಕಾರಣ 8ಕ್ಕೆ ಮುಂದೂಡಲಾಗಿದೆ.
40 ಗಜಗಳ ಈ ಟೂರ್ನಿಯಲ್ಲಿ ಸುಮಾರು 25ಕ್ಕೂ ಹೆಚ್ಚು ತಂಡಗಳು ಪಾಲ್ಗೊಳ್ಳುವ ಸಾಧ್ಯತೆ ಇದ್ದು, ಪ್ರವೇಶ ಶುಲ್ಕ ರೂ. 2,000 ಆಗಿರುತ್ತದೆ. ಒಂದೇ ದಿನದಲ್ಲಿ ಪಂದ್ಯಗಳನ್ನು ಮುಗಿಸುವ ಉದ್ದೇಶ ಇರುವುದರಿಂದ 4 ಓವರ್‌ಗಳ ಪಂದ್ಯವಾಗಿರುತ್ತದೆ. ಮೊದಲ ಬಹುಮಾನ 22,222 ರೂ. ಹಾಗೂ ದ್ವಿತೀಯ ಬಹುಮಾನ ರೂ. 11,111 ಆಗಿರುತ್ತದೆ. ನಗದು ಬಹುಮಾನದ ಜತೆಯಲ್ಲಿ ಆಕರ್ಷಕ ಟ್ರೋಫಿಯೂ ಇರುತ್ತದೆ.
ಟೆನಿಸ್ ಬಾಲ್ ಕ್ರಿಕೆಟ್‌ಗೆ ಪಡುಬಿದ್ರಿಯ ಪಡುಬಿದ್ರಿ ಫ್ರೆಂಡ್ಸ್ ಅಪಾರ ಕೊಡುಗೆ ನೀಡಿದೆ. ತಂಡದ ಹಿರಿಯ ಆಟಗಾರ ಶರತ್ ಶೆಟ್ಟಿ ಅವರು ಈಗಲೂ ಟೆನಿಸ್ ಬಾಲ್ ಕ್ರಿಕೆಟ್‌ಗೆ ತನ್ನದೇ ಆದ ಕೊಡುಗೆ ನೀಡುತ್ತಿದ್ದಾರೆ. ಈ ಕ್ಲಬ್‌ನಲ್ಲಿ ಆಡಿರುವ ರಿಯಾಜ್ ಪಡುಬಿದ್ರಿ ಉತ್ತಮ ಆಟಗಾರರಾಗಿದ್ದು, ಸಾಗರ್ ಕುಕ್ಕಿಕಟ್ಟೆ ತಂಡದಲ್ಲೂ ಆಡಿದ ಆಟಗಾರ. ದುಬೈಯಲ್ಲಿ ಉದ್ಯೋಗದಲ್ಲಿದ್ದು ಊರಿಗೆ ಬಂದಾಗಲೆಲ್ಲ ಈ ಟೂರ್ನಿಯನ್ನು ಆಯೋಜಿಸುತ್ತಿದ್ದಾರೆ.
ಹೆಚ್ಚಿನ ವಿವರಗಳಿಗೆ 9880341984, 9740242664 ದೂರವಾಣಿಯನ್ನು ಸಂಪರ್ಕಿಸಬಹುದು.