IPL Schedule 2025 : ಇಂಡಿಯನ್ ಪ್ರೀಮಿಯರ್ ಲೀಗ್ ವೇಳಾ ಪಟ್ಟಿ
ಮುಂಬಯಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ನ 18ನೇ ಆವೃತ್ತಿಯ ವೇಳಾ ಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪ್ರಕಟಿಸಿದೆ. The Board of Control for Cricket in India (BCCI) announced the schedule for the TATA Indian Premier League (IPL) 2025.
ಮಾರ್ಚ್ 22 ರಿಂದ ಆರಂಭಗೊಂಡ ಲೀಗ್ ಮೇ 25 ರ ವರೆಗೆ ನಡೆಯಲಿದೆ. 74 ಪಂದ್ಯಗಳು, 13 ಕ್ರೀಡಾಂಗಣಗಳಲ್ಲಿ ನಡೆಯಲಿದೆ. 12 ದಿನ ತಲಾ ಎರಡು ಪಂದ್ಯಗಳು ನಡೆಯಲಿವೆ. ಮಧ್ಯಾಹ್ನ 3:30ಕ್ಕೆ ಆರಂಭಗೊಂಡರೆ, ರಾತ್ರಿಪಂದ್ಯಗಳು 7:30ಕ್ಕೆ ಆರಂಭಗೊಳ್ಳಲಿವೆ.
ಹಾಲಿ ಚಾಂಪಿಯನ್ ಕೋಲ್ಕೊತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಋತುವಿನ ಮೊದಲ ಪಂದ್ಯದಲ್ಲಿ ಕೋಲ್ಕೊತಾದ ಈಡನ್ ಗಾರ್ಡನ್ಸ್‌ನಲ್ಲಿ ಮುಖಾಮುಖಿಯಾಗಲಿವೆ.