Thursday, November 21, 2024

565 km/h ವೇಗದ ಸ್ಮ್ಯಾಶ್‌ ದಾಖಲೆ ಬರೆದ ಸಾತ್ವಿಕ್‌ ಸಾಯಿರಾಜ್‌

ಹೊಸದಿಲ್ಲಿ: ಭಾರತದ ಬ್ಯಾಡ್ಮಿಂಟನ್‌ ಆಟಗಾರ ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ ಅತ್ಯಂತ ವೇಗದ ಸ್ಮ್ಯಾಶ್‌ ದಾಖಲಿಸುವ ಮೂಲಕ ಗಿನ್ನಿಸ್‌ ವಿಶ್ವದಾಖಲೆ ಬರೆದಿದ್ದರು. ಕಳೆದ ವರ್ಷ ದಾಖಲಾದ ಈ ದಾಖಲೆಯಿಂದಾಗಿ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಬ್ಯಾಡ್ಮಿಂಟನ್‌ ಅಭಿಮಾನಿಗಳ ಗಮನ ಅವರ ಮೇಲಿದೆ. ಗಂಟೆಗೆ 565 KM ವೇಗದಲ್ಲಿ ದಾಖಲಾದ ಅವರ ಸ್ಮ್ಯಾಶ್‌ ವಿಶ್ವ ದಾಖಲೆ ಎಂದು ಪರಿಗಣಿಸಲಾಗಿದೆ. The fastest badminton hit is 565 km/h (351.07 mph) achieved by Satwiksairaj Rankireddy of Inida.

22 ವರ್ಷದ ರೆಡ್ಡಿ ವಿಶ್ವದಲ್ಲಿ ಮೂರನೇ ರ್ಯಾಂಕ್‌ ತಲುಪಿದ್ದ ಆಟಗಾರ. 2022ರಲ್ಲಿ ಫ್ರೆಂಚ್‌ ಓಪನ್‌ ಡಬಲ್‌ ಹಾಗೂ ಏಷ್ಯನ್‌ ಚಾಂಪಿಯನ್‌ಷಿಪ್‌ ಡಬಲ್ಸ್‌ನಲ್ಲಿ ಚಾಂಪಿಯನ್‌ ಪಟ್ಟ ಗೆದ್ದಿರುವುದು ವಿಶೇಷ, ಮಹಾರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗ ಚಿರಾಗ್‌ ಶೆಟ್ಟಿ ಹಾಗೂ ರೆಡ್ಡಿ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವುದು ಹೆಮ್ಮೆಯ ಸಂಗತಿ. ಜಪಾನಿನ ಟೋಕಿಯೋದಲ್ಲಿರುವ YONEX ಕಂಪೆನಿಯ ಫ್ಯಾಕ್ಟರಿಯಲ್ಲಿ ಈ ದಾಖಲೆ ನಿರ್ಮಿಸಲಾಗಿದೆ. ವನಿತೆಯರ ವಿಭಾಗದಲ್ಲಿ ಮಲೇಷ್ಯಾದ ಟ್ಯಾನ್‌ ಪೆರ್ಲಿ 438km/h ವೇಗದಲ್ಲಿ ಸ್ಮ್ಯಾಶ್‌ ದಾಖಲೆ ಬರೆದಿದ್ದಾರೆ.

Related Articles