ಏಜೆನ್ಸೀಸ್ ದುಬೈ
ಕ್ರಿಕೆಟ್‌ನ ಶಿಶು ಹಾಂಕಾಂಗ್ ವಿರುದ್ಧದ ಏಷ್ಯಾಕಪ್ ಪಂದ್ಯದಲ್ಲಿ ಸೋಲಿನ ಆಘಾತದಿಂದ ತಪ್ಪಿಸಿಕೊಂಡಿದ್ದ ಭಾರತ ತಂಡ ಇಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.
ನಿಜಾಕತ್ ಖಾನ್ (92) ಹಾಗೂ ಅನ್ಷುಮಾನ್ ರಥ್(73) ಅವರ ಆರಂಭಿಕ ಜತೆಯಾಟದಿಂದ ತತ್ತರಿಸಿದ ಭಾರತ ಸೋಲಿನ ಅಂಚಿಗೆ ಸಿಲುಕಿತ್ತು. ಆದರೆ ಚೊಚ್ಚಲ ಪಂದ್ಯವನ್ನಾಡುತ್ತಿರುವ ಖಲೀಲ್ ಖಾನ್ (48ಕ್ಕೆ 3), ಕುಲ್‌ದೀಪ್ ಯಾದವ್ (42ಕ್ಕೆ 2) ಹಾಗೂ ಯುಜುವೇಂದ್ರ ಚಹಲ್ (46ಕ್ಕೆ 3) ಅವರ ಬೌಲಿಂಗ್ ನೆರವಿನಿಂದ ಭಾರತ 26 ರನ್‌ಗಳ ಜಯ ಗಳಿಸಿ ಸೋಲಿನ ಆಘಾತ ತಪ್ಪಿಸಿಕೊಂಡಿತು.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ಶಿಖರ್ ಧವನ್ (127) ಹಾಗೂ ಅಂಬಾಟಿ ರಾಯುಡು (60) ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಬೃಹತ್ ಮೊತ್ತ ಕಲೆಹಾಕುವ ಲಕ್ಷಣ ತೋರಿತ್ತು. ಆದರೆ ಕೊನೆಯ ಹತ್ತು ಓವರ್‌ಗಳಲ್ಲಿ ಹಾಂಕಾಂಗ್ ಬೌಲರ್‌ಗಳು ಶಿಸ್ತಿನ ಬೌಲಿಂಗ್ ಪ್ರದರ್ಶಿಸಿದ ಕಾರಣ ಭಾರತ 7 ವಿಕೆಟ್ ನಷ್ಟಕ್ಕೆ 285 ರನ್ ಗಳಿಸಿತು.
286 ರನ್ ಗುರಿ ಹೊತ್ತ ಹಾಂಕಾಂಗ್ ಪರ ಆರಂಭಿಕ ಆಟಗಾರರು 174 ರನ್ ಜತೆಯಾಟವಾಡಿದಾಗ ಭಾರತ ಪಾಳಯದಲ್ಲಿ ಆತಂಕ ಮನೆ ಮಾಡಿತ್ತು. ಆದರೆ ಕುಲ್‌ದೀಪ್ ಯಾದವ್ ಬೌಲಿಂಗ್‌ನಲ್ಲಿ 92 ರನ್ ಗಳಿಸಿ ಆಡುತ್ತಿದ್ದ ನಿಜಾಕತ್ ಖಾನ್ ವಿಕೆಟ್ ಒಪ್ಪಿಸುವ ಮೂಲಕ ಹಾಂಕಾಂಗ್‌ನ ಪೆವಿಲಿಯನ್ ಪೆರೆಡ್ ಆರಂಭ ವಾಯಿತು. ಅಂತಿಮವಾಗಿ 8 ವಿಕೆಟ್ ಕಳೆದುಕೊಂಡು ಕೇವಲ 259 ರನ್ ಗಳಿಸಿತು. ಚೊಚ್ಚಲ ಪಂದ್ಯವನ್ನಾಡಿದ ಖಲೀಲ್ ಖಾನ್ ಶಿಸ್ತಿನ ಬೌಲಿಂಗ್ ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾದರು.
ಪಂದ್ಯಶ್ರೇಷ್ಠ ಗೌರವವನ್ನು ಶಿಖರ್ ಧವನ್‌ಗೆ ನೀಡುವ ಬದಲಾಗಿ ನಿಜಾಕತ್ ಖಾನ್‌ಗೆ ನೀಡಿರುತ್ತಿದ್ದರೆ ಅನನುಭವಿ ಹಾಂಕಾಂಗ್ ತಂಡದ ಮನೋಬಲವನ್ನು ಹೆಚ್ಚಿಸಿದಂತಾಗುತ್ತಿತ್ತು.