Friday, October 18, 2024

ಚಿನ್ನಸ್ವಾಮಿಯಲ್ಲಿ ಏರಿದೆ, ಹಾರಿದೆ ಕನ್ನಡದ ಬಾವುಟ!

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳು ನಡೆಯುವಾಗ ಕರ್ನಾಟಕದ ಧ್ವಜ ಹಾರುತ್ತಿರುವುದು ಪ್ರೇಕ್ಷಕರ ಗ್ಯಾಲರಿಯಲ್ಲಿ ಮಾತ್ರ. ಆದರೆ ಈ ಬಾರಿ ನ್ಯೂಜಿಲೆಂಡ್‌ ವಿರುದ್ಧ ನಡೆಯುತ್ತಿರುವ ಟೆಸ್ಟ್‌ ಪಂದ್ಯದ ವೇಳೆ ಕರ್ನಾಟಕದ ಧ್ವಜ ಭಾರತ, ನ್ಯೂಜಿಲೆಂಡ್‌ ತಂಡಗಳ ಧ್ವಜದ ನಡುವೆ ರಾರಾಜಿಸಿದ್ದು ವಿಶೇಷ ಆಕರ್ಷಣೆ. The Karnataka flag was seen flying alongside the Indian and New Zealand flag at M Chinnaswamy Stadium.

ಕನ್ನಡ ನಾಡು ನುಡಿ ಈಗ ಆತಂಕದಲ್ಲಿದೆ. ಅಭಿವೃದ್ಧಿ ಹೊಂದುತ್ತಿರುವ ರಾಜ್ಯದಲ್ಲಿ ಇದು ಸಾಮಾನ್ಯ. ಅಭಿವೃದ್ಧಿಯ ಜೊತೆಯಲ್ಲಿ ನಮ್ಮ ನಾಡು, ನುಡಿಯನ್ನು ಉಳಿಸಿಕೊಳ್ಳುವ ಅಗತ್ಯವಿದೆ. ರಾಜ್ಯ ಕ್ರಿಕೆಟ್‌ ಸಂಸ್ಥೆ ಕೈಗೊಂಡಿರುವ ಈ ನಿರ್ಞಧಾರ ನಿಜವಾಗಿಯೂ ಸ್ವಾಗತಾರ್ಹ.

ಇತ್ತೀಚಿನ ದಿನಗಳಲ್ಲಿ ಕನ್ನಡ ನಾಡು ನುಡಿಯ ಬಗ್ಗೆ ಉತ್ತರ ಭಾರತದ ಕೆಲವು ವ್ಯಕ್ತಿಗಳು ವೀಡಿಯೋ ಮಾಡಿ ಗೇಲಿ ಮಾಡುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬಂದಿದೆ. ನಾಮ ಫಲಕಗಳು ಕನ್ನಡದಲ್ಲಿರುವುದು ಕಡ್ಡಾಯ ಮಾಡಲಾಗಿದೆ.

Related Articles