Friday, November 22, 2024

The Sports School: ದಿ ಸ್ಪೋರ್ಟ್ಸ್  ಸ್ಕೂಲ್ ಗೆ ಬಿಟಿಆರ್ ಶೀಲ್ಡ್ ಚಾಂಪಿಯನ್ ಪಟ್ಟ

ಬೆಂಗಳೂರು:  ನಾಯಕ ಥಾನ್ಷ್ ಕೃಷ್ಣ ಎಂ. (106) ಅವರ ಆಕರ್ಷಕ ಶತಕದ ನೆರವಿನಿಂದ ದಿ ಸ್ಪೋರ್ಟ್ಸ್ ಸ್ಕೂಲ್ (The Sports School) ತಂಡ ವೈದೇಹಿ ಸ್ಕೂಲ್ ಆಫ್ ಎಕ್ಸಲೆನ್ಸಿ ವಿರುದ್ಧ 2 ರನ್ಗಳ ಅಂತರದಲ್ಲಿ ಜಯ ಗಳಿಸಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ನಡೆಸುವ 14 ವರ್ಷ ವಯೋಮಿತಿಯ ಬಿಟಿಆರ್ (BTR Tournament) ಗ್ರೂಪ್ 1, ಡಿವಿಜನ್ 3 ಚಾಂಪಿಯನ್ ಪಟ್ಟಗೆದ್ದುಕೊಂಡಿದೆ.

ಥಾನ್ಷ್ 145 ಎಸೆತಗಳನ್ನೆದುರಿಸಿ 13 ಬೌಂಡರಿ ನೆರವಿನಿಂದ 106 ರನ್ ಗಳಿಸುವುದರೊಂದಿಗೆ ದಿ ಸ್ಪೋರ್ಟ್ಸ್ ಸ್ಕೂಲ್ (The sports School) ತಂಡ ತಂಡ 45.3 ಓವರ್ಗಳಲ್ಲಿ 218 ರನ್ ಗಳಿಸಿತು. ತನ್ಯ 31 ಮತ್ತು ಕಾರ್ತಿಕ್ ತಾಜ್ 23 ರನ್ ಗಳಿಸಿ ತಂಡದ ಸವಾಲಿನ ಮೊತ್ತಕ್ಕೆ ನೆರವಾದರು. ವೈದೇಹಿ ಸ್ಕೂಲ್ ಪರ ತರುಣ್ 26ಕ್ಕೆ 3, ಮತ್ತು ಶಾರ್ವಿಲ್ 49ಕ್ಕೆ 2 ವಿಕೆಟ್ ಗಳಿಸಿ ಬೌಲಿಂಗ್ನಲ್ಲಿ ಮಿಂಚಿದರು.

ವೈದೇಹಿ ಸ್ಕೂಲ್ ಆಫ್ ಎಕ್ಸಲೆನ್ಸ್ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 216 ರನ್ ಗಳಿಸಿ ಕೇವಲ 2 ರನ್ ಅಂತರದಲ್ಲಿ ಸೋಲೋಪ್ಪಿಕೊಂಡಿತು. ರಿತ್ವಿಕ್ (58) ಹಾಗೂ ಶಾರ್ವಿಲ್ (70) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ. ರಿತ್ವಿಕ್ 75 ಎಸೆತಗಳನ್ನೆದುರಿಸಿ  7 ಬೌಂಡರಿ ನೆರವಿನಿಂದ 58 ರನ್ ಗಳಿಸಿದರೆ, ಶಾರ್ವಿಲ್ 91 ಎಸೆತಗಳನ್ನು ಎದುರಿಸಿ 5 ಬೌಂಡರಿ ನೆರವಿನಿಂದ 70 ರನ್ ಗಳಿಸುವುದರೊಂದಿಗೆ ತಂಡ ದಿಟ್ಟ ಹೋರಾಟ ನೀಡಿತು. ಆದರೆ ವಿಶಾಲ್  (2/27) ಮತ್ತು ಕಾರ್ತಿಕ್ ರಾಜ್ (32ಕ್ಕೆ 3) ಉತ್ತಮ ಬೌಲಿಂಗ್ ಪ್ರದರ್ಶಿಸುವುದರೊಂದಿಗೆ ದಿ ಸ್ಪೋರ್ಟ್ಸ್ ಸ್ಕೂಲ್ ಜಯ ಗಳಿಸಿ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು.

ಇದನ್ನೂ ಓದಿ: Royal Challengers Women : ಈ ಬಾರಿಯೂ ನಮಗಿಲ್ಲ ಕಪ್‌ : ಸೋಲಿನೊಂದಿಗೆ WPL ಅಭಿಯಾನ ಮುಗಿಸಿದ ಆರ್‌ಸಿಬಿ

ದಿ ಸ್ಪೋರ್ಟ್ಸ್ ಸ್ಕೂಲ್ ತಂಡದ ವಿವರ:

ಥಾನ್ಷ್ ಕೃಷ್ಣ ಎಂ (ನಾಯಕ), ರುದ್ರಾಂಶ್ ಸೋಮ್ವಂಶಿ, ಚಾರ್ಲೆ ಸಿಂಗ್, ವೇದಾಂತ್ ಸೆಗಾಲ್, ಅಲೋಕ್ ಎಚ್. ಪಟೇಲ್, ಆರ್ಯನ್ ಪನ್ವಾರ್, ಸಮರ್ಥ್ ಪಾಟಿಲ್. ತಿಶಾಂತ್ ಕಿಶೋರ್ ಕುಮಾರ್, ಆತ್ರೇಯ ಭಟ್, ನಿತಿನ್ ಜಿ. ಮುಲ್ಕಿ (ಕೋಚ್), ಕಾರ್ತಿಕ್ ರಾಜ್, ವಿಶಾಲ್ ಸಂಜಯ್, ಜಿಮಿ ತನಯ್. ಪ್ರಣವ್ ಡಿ.ಆರ್, ಜಯ ಪ್ರಿಯಾ (ಪ್ರಾಂಶುಪಾಲರು), ನಿರೆಕ್ ರಾವ್ ಯೆಡ್ಲಾ, ಅನಂತ್ ಆರ್ (ಡೈರೆಕ್ಟರ್ ಕ್ರಿಕೆಟ್ ಅಪರೇಷನ್ಸ್), ಡಾ. ಯು.ವಿ. ಶಂಕರ್ (ಡೈರೆಕ್ಟರ್ ಸ್ಪೋರ್ಟ್ಸ್), ಧ್ಯಾನ್ ಸೂರ್ಯ, ತೇಜಸ್, ರುಶಿಲ್ ಆರ್. ಭಲಾಲ್, ಮಾಹಿಲ್ ಮೆಹ್ತಾ.

Related Articles