Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಭಾರತ ವಿರುದ್ಧ ಪಾಕ್‌ ಸೋತರೆ ಅಲ್ಲಿ ಯಾರೂ ಟಿವಿ ಒಡೆಯುವುದಿಲ್ಲ!

ದುಬೈ: ಚಾಂಪಿಯನ್ಸ್‌ ಟ್ರೋಫಿಯಲ್ಲಿ ಆತಿಥೇಯ ಪಾಕಿಸ್ತಾನ ಈಗಾಗಲೇ ಒಂದು ಪಂದ್ಯದಲ್ಲಿ ಸೋತಿದ್ದು ಒಂದು ವೇಳೆ ಪ್ರಶಸ್ತಿ ಗೆಲ್ಲುವ ಫೇವರಿಟ್‌ ಭಾರತದ ವಿರುದ್ಧ ಸೋತರೆ ಪಾಕಿಸ್ತಾನದಲ್ಲಿ ಯಾರೂ ಟಿವಿ ಒಡೆದು ಪುಡಿ ಮಾಡವುದಿಲ್ಲ ಎಂದು ಪಾಕಿಸ್ತಾನದ ಮಾಜಿ ಆಟಗಾರರೊಬ್ಬರು ಹೇಳಿದ್ದಾರೆ. This time Pakistan cricket fans will not break the TV if host nation is lost against India.

ನಾವು ಪಾಕಿಸ್ತಾನ ಕ್ರಿಕೆಟ್‌ ತಂಡದ ಬಗ್ಗೆ ಮಾತ್ರ ಮಾತನಾಡುತ್ತಿದ್ದೇವೆ, ಆದರೆ ಅಲ್ಲಿ ಆರ್ಥಿಕ ಪರಿಸ್ಥಿತಿಯ ಹೇಗಿದೆ ಎಂಬುದು ಪಾಕಿಸ್ತಾನ ಕ್ರಿಕೆಟ್‌ನ ಮಾಜಿ ಆಟಗಾರ ಬಸಿತ್‌ ಆಲಿ ಅವರ ಅಭಿಪ್ರಾಯದಲ್ಲಿ ವ್ಯಕ್ತವಾಗುತ್ತದೆ. ಭಾನುವಾರ ಭಾರತ ವಿರುದ್ಧದ ಪಂದ್ಯ ಪಾಕ್‌ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ. ಗುಂಪಿನ ಎರಡು ಅಗ್ರ ಸ್ಥಾನದಲ್ಲಿರುವ ತಂಡಗಳು ಮುಂದಿನ ಹಂತಕ್ಕೆ ತೇರ್ಗಡೆಯಾಗುವುದರಿಂದ ಪಾಕಿಸ್ತಾನಕ್ಕೆ ಭಾರತ ವಿರುದ್ಧದ ಪಂದ್ಯವನ್ನು ಗೆಲ್ಲಲೇಬೇಕಾಗಿದೆ.

“ನಾಳೆಯ ಪಂದ್ಯದಲ್ಲಿ ಪಾಕಿಸ್ತಾನ ಗೆಲ್ಲುವ ಫೇವರಿಟ್‌. ಪಾಕಿಸ್ತಾನ ಸೋತರೆ ಯಾರಿಗೂ ಬೇಸರವಾಗೊಲ್ಲ ಏಕೆಂದರೆ ಪಾಕಿಸ್ತಾನದ ಕ್ರಿಕೆಟ್‌ ಈಗ ಅಷ್ಟು ಕೆಳಮಟ್ಟವನ್ನು ತಲುಪಿದೆ. ಪಂದ್ಯ ಏಖಮುಖವಾಗಿ ನಡೆದರೂ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ, ಯಾರೂ ಮನೆಯಲ್ಲಿರುವ ಟಿವಿ ಸೆಟ್‌ಗಳನ್ನು ಪುಡಿ ಮಾಡುವುದಿಲ್ಲ, ಏಕೆಂದರೆ ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಆ ಹಂತ ತಲುಪಿದೆ, ಈ ಕೇಲವ ಮಾತಿನಲ್ಲಿ ಪಂದ್ಯದ ಬಗ್ಗೆ ಅಭಿಪ್ರಾಯ ಹೇಳಬಲ್ಲರು,” ಎಂದು ಬಸಿತ್‌ ಅಲಿ ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಹೇಳಿದ್ದಾರೆ.

ಪಾಕಿಸ್ತಾನ ಬಾಯಿಯಲ್ಲಿ ಕ್ರಿಕೆಟ್‌ ಆಡುವುದನ್ನು ಬಿಡಬೇಕು, ಕ್ರಿಕೆಟ್‌ ಉತ್ತಮಪಡಿಸಲು ಬುದ್ಧಿ ಉಪಯೋಗಿಸಬೇಕು. ಕ್ರೀಡಾಂಗಣದ ನವೀಕರಣಕ್ಕೆ ವ್ಯಯ ಮಾಡಿದ ಹಣದಲ್ಲಿ ಸ್ವಲ್ಪ ಭಾಗ ಕ್ರಿಕೆಟ್‌ ಆಟಗಾರರನ್ನು ಉತ್ತಮಪಡಿಸುವ ಬಗ್ಗೆ ಮಾಡಿರುತ್ತಿದ್ದರೆ ತಂಡದ ಸ್ಥಿತಿ ಈ ಹಂತ ತಲಪುತ್ತಿರಲಿಲ್ಲ, ಎಂದು ಬಸಿತ್‌ ಅಲಿ ಆರೋಪಿದ್ದಾರೆ.


administrator