ಕಸ ಆಯುವುದೂ ಈಗ ಕ್ರೀಡೆ! ಜಗತ್ತಿಗೆ SPOGOMI ಪರಿಚಯಿಸಿದ ಜಪಾನ್
ಜಪಾನ್ ಜಗತ್ತಿಗೇ ಮಾದರಿ ದೇಶ ಎನ್ನುತ್ತಾರೆ. ಅದು ತಪ್ಪಲ್ಲ. ನಾವು ವಿಶ್ವಕಪ್ ಮಾಡಿ ಕಸ ಹಾಕುತ್ತೇವೆ. ಅವರು ವಿಶ್ವಕಪ್ ನಡೆಸಿ ಕಸ ತೆಗೆಯುತ್ತಾರೆ. ಕಸ ಆಯುವ ಕ್ರಮಬದ್ಧ ಸ್ಪರ್ಧೆಯನ್ನು ಕ್ರೀಡೆಯಾಗಿ ಪರಿವರ್ತಿಸಿ ಅದಕ್ಕೆ ಸ್ಪೊಗೊಮಿ SPOGOMI ಎಂದೂ ಹೆಸರನ್ನಿಟ್ಟಿದ್ದಾರೆ. ಈ ವರ್ಷ ಮೊದಲ ವಿಶ್ವಕಪ್ ನಡೆದು ಬ್ರಿಟನ್ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು. Trash picking is sports in Japan called SPOGOMI.
ಭಾರತವೂ ಈ ಬಾರಿ ಪಾಲ್ಗೊಂಡಿತ್ತು. ಚೆನ್ನೈಯಿಂದ 28 ಸದಸ್ಯರ ತಂಡ ಪಾಲ್ಗೊಂಡಿದ್ದು 317ಕೆಜಿ ಕಸ ಸಂಗ್ರಹಿಸಿದ್ದಾರೆ. ಜಪಾನಿನಲ್ಲಿ 2008ರಲ್ಲಿ ಕಸ ಆಯುವುದಕ್ಕೆ ಕ್ರೀಡೆ ಎಂದು ನಾಮಕರಣ ಮಾಡಿದರು. ಅದಕ್ಕೆ ಸ್ಪೊಗೊಮಿ ಎಂದು ಹೆಸರಿಟ್ಟರು. SPO ಅಂದರೆ ಸ್ಪೋರ್ಟ್ಸ್, ಕ್ರೀಡೆ. GOMI ಅಂದರೆ ಕಸ ಆಯುವುದು. ಹಾಗಂತ ಒಟ್ಟಾರೆ ರಾಶಿ ಇದ್ದ ಅಥವಾ ಯಾವುದೋ ಕಸದ ಬುಟ್ಟಿಯಲ್ಲಿದ್ದ ಕಸವನ್ನು ತಂದು ಹಾಕಿ ಗೆದ್ದೇವೆಂದು ಹೇಳುವುದಲ್ಲ. ಮೂವರು ಸದಸ್ಯರ ತಂಡ ಒಂದು ಗಂಟೆಯಲ್ಲಿ ನಿಗದಿತ ಸ್ಥಳದಲ್ಲಿ ಕೊಟ್ಟಂಥ ಚೀಲಕ್ಕೆ ತುಂಬುವ ಕಸವನ್ನು ಆಯ್ಕೆ ಮಾಡಿ ಪ್ರತ್ಯೇಕಸಿಬೇಕು. ಕಸ ಪ್ರತ್ಯೇಕಿಸಲು ಹೆಚ್ಚುವರಿ 20 ನಿಮಿಷ ನೀಡಲಾಗುತ್ತದೆ. ಸಿಗರೇಟಿನ ಉಳಿದ ಭಾಗ ಅಯ್ಕೆ ಮಾಡಿದರೆ ಹೆಚ್ಚು ಅಂಕಗಳಿರುತ್ತವೆ.
ಯಾರು ಸ್ಪರ್ಧಿಸಬಹುದು?
ಈ ಕ್ರೀಡೆಯಲ್ಲಿ ಯಾರು ಬೇಕಾದರೂ ಸ್ಪರ್ಧಿಸಬಹುದು. ವಯಸ್ಸಿನ ಮಿತಿ ಇರುವುದಿಲ್ಲ. ಪ್ರಾಥಮಿಕ ಹಂತದಲ್ಲಿ ನಿಯಮಗಳ ಸಡಿಲಿಕೆ ಇರುತ್ತದೆ. ಇಲ್ಲಿ ಯಾರೂ ಬೇಕಾದರೂ ಗೆಲ್ಲಬಹುದು. ತಂಡಗಳ ಪ್ರದರ್ಶನದ ಆಧಾರದ ಮೇಲೆ ಅಂಕಗಳನ್ನು ನೀಡಲಾಗುತ್ತದೆ. ಜಪಾನಿನಲ್ಲಿ ನಡೆದ ವಿಶ್ವಕಪ್‌ನಲ್ಲಿ 47 ಅಧಿಕಾರ ವಲಯಗಳನ್ನು ಆಯ್ಕೆ ಮಾಡಲಾಗಿತ್ತು. 20 ದೇಶಗಳು ಪಾಲ್ಗೊಂಡಿದ್ದವು. ಇದು ಭೂಮಿಗೆ ಆಪ್ತವಾದ ಕ್ರೀಡೆ ಎನ್ನಲಾಗುತ್ತಿದೆ. ಇಲ್ಲಿ ನಮ್ಮ ಆರೋಗ್ಯದ ಜೊತೆಯಲ್ಲಿ ಭೂಮಿಯ ಪರಿಸರದ ಆರೋಗ್ಯವನ್ನೂ ಕಾಪಾಡುತ್ತೇವೆ. ಜಗತ್ತಿನಾದ್ಯಂತ ಸಾಗರಕ್ಕೆ ಕಸ ಹಾಕುವುದು ಹೆಚ್ಚುತ್ತಿದ್ದು, ಇದು ಮಾನವ ಜಗತ್ತಿಗೆ ಮಾರಕವಾಗಿದೆ. ನಾವೇ ಇದಕ್ಕೆ ಪರಿಹಾರ ಕಂಡುಕೊಳ್ಳದಿದ್ದರೆ ಇನ್ನಾರಿಂದ ಸಾಧ್ಯ?
ಸಾಗರವನ್ನು ಸೇರಿರುವ ಕಸದ ರಾಶಿಯಲ್ಲಿ ಶೇ 80 ರಷ್ಟು ಭೂಮಿಯಿಂದಲೇ ಅದರಲ್ಲೂ ನಗರ ಪ್ರದೇಶದಿಂದಲೇ ಬಂದಿದ್ದು. ಕಸವನ್ನು ಆಯುವುದೇ ಇದಕ್ಕೆ ಕೊನೆಯ ಪರಿಹಾರ ಮಾರ್ಗ. ಜಪಾನ್ ದೇಶ SPOGOMI ಮೂಲಕ ಜಗತ್ತಿನಾದ್ಯಂತ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿದೆ. ಈ ಕ್ರೀಡೆ ವ್ಯಕ್ತಿಯಿಂದ ವ್ಯಕ್ತಿಗೆ ದೇಶದಿಂದ ದೇಶಕ್ಕೆ ಹಬ್ಬುತ್ತಿರುವುದು ಖುಷಿಯ ಸಂಗತಿ. ಇದು ನಿರಂತರವಾಆದ ಕ್ರೀಡೆಯಾಗಿದೆ. ಭಾರತದಲ್ಲಿ ಕಸ ಆಯುವವರನ್ನು “ಕಸದವರು” ಎಂದು ಬಹಳ ತಾತ್ಸಾರದಿಂದ ಕಾಣುತ್ತಾರೆ. ಆದರೆ ಜಪಾನ್ ಅವರನ್ನು ಚಾಂಪಿಯನ್ ರೀತಿಯಲ್ಲಿ ಗೌರವಿಸಲು ಕಸ ಆಯುವುದನ್ನು ಕ್ರೀಡೆಯಾಗಿ ಪರಿವರ್ತಿಸಿರುವುದು ಗಮನಾರ್ಹ.
2008ರಲ್ಲಿ SPOGOMI ಕ್ರೀಡೆಯನ್ನು ಸಾಮಾಜಿಕ ಕ್ರೀಡಾ ಆರಂಭದ ಉದ್ದೇಶದಿಂದ ಮೆಮಿತ್ಸುಕಾ ಕೆನಿಚಿ “ಕಸ ಆಯುವುದು ಒಂದು ಕ್ರೀಡೆ” ಎಂಬ ಘೋಷ ವಾಕ್ಯದೊಂದಿಗೆ ಆರಂಭಿಸಿತು. ಈಗ ಜಗತ್ತು ಜಪಾನ್ ಕಡೆಗೆ ಮುಖ ಮಾಡಿದೆ. ಜಪಾನ್ ಜಗತ್ತಿಗೇ ಆದರ್ಶ ಎನಿಸಿದೆ.