Friday, November 22, 2024

ಟೆಕ್ವಾಂಡೋ: ಚಿನ್ನ ಗೆದ್ದ ಭಂಡಾರಿ ಪುಟಾಣಿಗಳು

ಸ್ಪೋರ್ಟ್ಸ್ ಮೇಲ್ ವರದಿ:

ಬೆಂಗಳೂರು ಟ್ರಿಯೋ ವರ್ಲ್ಡ್ ಶಾಲೆಯ ಅಕ್ಕ ಮತ್ತು ತಮ್ಮ ದಕ್ಷಿಣ ಕೊರಿಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಟೆಕ್ವಾಂಡೋ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿರುತ್ತಾರೆ.

೨೯ ರಾಷ್ಟ್ರಗಳಿಂದ ಸ್ಪರ್ಧಿಗಳು ಪಾಲ್ಗೊಂಡಿದ್ದ ಚಾಂಪಿಯನ್‌ಷಿಪ್‌ನಲ್ಲಿ ಸುಮಾರು ೨೦೦೦ಕ್ಕೂ ಹೆಚ್ಚು ಸ್ಪರ್ಧಿಗಳು ಪದಕಕ್ಕಾಗಿ ಸೆಣಸಿದ್ದರು. ಟ್ರಯೋ ವರ್ಲ್ಡ್ ಶಾಲೆಯ ಅಕ್ಕ ಮತ್ತು ತಮ್ಮ ತೋರಿದ ಸಾಧನೆ ದೇಶಕ್ಕೇ ಹೆಮ್ಮೆ ತರುವಂಥದ್ದು.
ಫೈನಲ್ ಪಂದ್ಯದಲ್ಲಿ ನಿತ್ಯ ಭಂಡಾರಿ ನಾಲ್ಕು ಬೇರೆ ಬೇರೆ ರಾಷ್ಟ್ರಗಳಿಂದ ಬಂದ ನಾಲ್ವರ ಸ್ಪರ್ಧಿಗಳನ್ನು ಮಣಿಸಿ ಚಿನ್ನ ಗೆದ್ದರು. ಚೀನಾ, ಕೊರಿಯಾ, ಮಾಸ್ಕೋ ಹಾಗೂ ಜಪಾನ್‌ನ ಸ್ಪರ್ಧಿಗಳು ನಿತ್ಯಾಗೆ ಶರಣಾದರು. ಅದೇ ರೀತಿ ತಮ್ಮ ದಿವಿತ್ ಭಂಡಾರಿ ಥಾಯ್ಲೆಂಡ್, ಈಜಿಪ್ಟ್, ಚೀನಾ ಹಾಗೂ ಕೊರಿಯಾದ ಸ್ಪರ್ಧಿಗಳಿಗೆ ಸೋಲುಣಿಸಿ ಚಿನ್ನ ಗೆದ್ದರು.
೮ ವರ್ಷದ ನಿತ್ಯಾ ಭಂಡಾರಿ ನಾಲ್ಕನೇ ತರಗತಿಯ ವಿದ್ಯಾರ್ಥಿನಿ,ದಿವಿತ್ ೬ ವರ್ಷ, ೧ನೇ ತರಗತಿಯಲ್ಲಿ ಟ್ರಿಯೋ ವರ್ಲ್ಡ್ ಸ್ಕೂಲ್‌ನಲ್ಲಿ ಓದುತ್ತಿದ್ದು ಸಬ್ ಜೂನಿಯರ್ ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರೆ. ನಿತ್ಯಾ ಏಳನೇ ವಯಸ್ಸಿನಲ್ಲಿ ಟೆಕ್ವಾಂಡೋ ಅಭ್ಯಾಸ ಆರಂಭಿಸಿದರೆ ದಿವಿತ್ ಕೇವಲ ೫ನೇ ವಯಸ್ಸಿನಲ್ಲಿ ಅ‘ಭ್ಯಾಸಕ್ಕಿಳಿದರು. ಶೇಷಾದ್ರಿಪುರಂನಲ್ಲಿರುವ ಎಸ್‌ಜಿ ಮಾಸ್ಟರ್  ಈ ಇಬ್ಬರೂ ಮಕ್ಕಳಿಗೆ ತರಬೇತಿ ನೀಡುತ್ತಿದ್ದಾರೆ. ಜಿಯೋಂಜು ಚಾಂಪಿಯನ್‌ಷಿಪ್ ಇಬ್ಬರ ಪಾಲಿಗೂ ಮೊದಲ ಅಂತಾರಾಷ್ಟ್ರೀಯ ಚಾಂಪಿಯನ್‌ಷಿಪ್ ಆಗಿರುತ್ತದೆ.

Related Articles