–
ಉಡುಪಿ: ಉಡುಪಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿರುವ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವ ಸಲುವಾಗಿ Udupi District Cricket Association (UDCA)ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆ (ಯುಡಿಸಿಎ)ಯು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (MAHE) ಜೊತೆಗೂಡಿ ಇದೇ ತಿಂಗಳ 15, 22 ಮತ್ತು 29 ರಂದು ಬಾಲಕ ಮತ್ತು ಬಾಲಕಿಯರಿಗಾಗಿ ಪ್ರತಿಭಾನ್ವೇಷಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. Udupi District Cricket Association announces Talent hunt for young cricketers.
19, 23, 14, 16 ವರ್ಷ ವಯೋಮಿತಿಯ ಬಾಲಕ ಹಾಗೂ ಬಾಲಕಿಯರಿಗಾಗಿ ಹಾಗೂ ಡಿಸೆಂಬರ್ 22 ರಂದು ಮಹಿಳಾ ವಿಭಾಗದ ಮುಕ್ತ ಆಯ್ಕೆ ಇರುತ್ತದೆ.
ದಿನಾಂಕ ಡಿಸೆಂಬರ್ 15, 22 ಮತ್ತು 29
19 ವರ್ಷ ವಯೋಮಿತಿಯ ಪ್ರತಿಭಾನ್ವೇಷಣೆ 15 ಡಿಸೆಂಬರ್ 2024.
ಸ್ಥಳ: ಎಂಐಟಿ ಕ್ರಿಕೆಟ್ ಅಂಗಣ ಮಣಿಪಾಲ.
ಅರ್ಹತೆ: 1/9/2005 ರಂದು ಅಥವಾ ನಂತರ ಜನಿಸಿದವರು ಅರ್ಹರು.
23 ವರ್ಷ ವರ್ಷ ವಯೋಮಿತಿ ಮತ್ತು ಮಹಿಳೆಯರ ಪ್ರತಿಭಾನ್ವೇಷಣೆ, ಡಿಸೆಂಬರ್ 22, 2024,
ಸ್ಥಳ: ಎಂಐಟಿ ಕ್ರಿಕೆಟ್ ಅಂಗಣ ಮಣಿಪಾಲ.
ಅರ್ಹತೆ: 1/9/2001 ರಂದು ಅಥವಾ ಅದರ ನಂತರ ಜನಿಸಿದವರು ಅರ್ಹರು.
16 ವರ್ಷ ವಯೋಮಿತಿಯ ಪ್ರತಿಭಾನ್ವೇಷಣೆ, 29 ಡಿಸೆಂಬರ್, 2024.
ಸ್ಥಳ: ಎಂಐಟಿ ಕ್ರಿಕೆಟ್ ಅಂಗಣ ಮಣಿಪಾಲ.
ಅರ್ಹತೆ: 1/9/2008 ರಂದು ಅಥವಾ ನಂತರ ಜನಿಸಿದವರು ಅರ್ಹರು.
14 ವರ್ಷ ವಯೋಮಿತಿಯ ಪ್ರತಿಭಾನ್ವೇಷಣೆ, 29 ಡಿಸೆಂಬರ್ 2024,
ಸ್ಥಳ: ಎಂಐಟಿ ಕ್ರಿಕೆಟ್ ಅಂಗಣ ಮಣಿಪಾಲ
ಅರ್ಹತೆ: 1/9/2010 ರಂದು ಅಥವಾ ನಂತರ ಜನಿಸಿದವರು ಅರ್ಹರು.
ಯುವ ಆಟಗಾರರು ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ತಮ್ಮ ಪ್ರತಿಭೆಯನ್ನು ಪ್ರಕಟಿಸಲು ಇದು ಉತ್ತಮ ಅವಕಾಶ. ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ತರಬೇತುದಾರರು ಹಾಗೂ ಆಯ್ಕೆ ಸಮಿತಿಯರವರು ಈ ಸಂದರ್ಭದಲ್ಲಿ ಹಾಜರಿದ್ದು, ಪ್ರತಿಭೆಗಳನ್ನು ಗುರುತಿಸುವ ಕಾರ್ಯ ಮಾಡಲಿದ್ದಾರೆ.
ಆಯ್ಕೆಗೊಂಡ ಆಟಗಾರರಿಗೆ 50 ಓವರ್‌ಗಳ ಲೀಗ್ ಪಂದ್ಯವಿರುತ್ತದೆ. ಆಟಗಾರರು 200 ರೂ. ನೋಂದಾವಣೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ವಯಸ್ಸಿನ ದೃಢೀಕರಿಸಲು ಅಗತ್ಯವಿರುವ ದಾಖಲೆಗಳನ್ನು ಹೊಂದಿರಬೇಕು. ಉಡುಪಿ ಜಿಲ್ಲೆಯ ಉಡುಪಿ, ಬ್ರಹ್ಮಾವರ, ಕಾಪು, ಹೆಬ್ರಿ, ಕಾರ್ಕಳ, ಬೈಂದೂರು ಮತ್ತು ಕುಂದಾಪುರ ತಾಲೂಕಿನ ಆಟಗಾರರಿಗೆ ಮಾತ್ರ ಸೀಮಿತವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ, ಮಾಹೆಯ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಪ್ರೊ. ಟ್ರೆವರ್ ಡಯಾಸ್ ಅವರನ್ನು 9902537030 ಸಂಪರ್ಕಿಸಬಹುದು.
ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರು ಹಾಗೂ ಪ್ರಸಾದ್ ನೇತ್ರಾಲಯದ ಮೆಡಿಕಲ್ ಆಫಿಸರ್ ಡಾ.ಕೃಷ್ಣ ಪ್ರಸಾದ್ ಮತ್ತು ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಗೌರವ ಅಧ್ಯಕ್ಷರು ಹಾಗೂ ಮಾಹೆಯ ಪ್ರೊ. ಚಾನ್ಸಲರ್ ಡಾ. ಎಸ್.ಎಸ್. ಬಲ್ಲಾಳ್ ಅವರು ಮುತುವರ್ಜಿ ವಹಿಸಿ ಈ ಯೋಜನೆಯನ್ನು ರೂಪಿಸಿದ್ದಾರೆ. ಉಡುಪಿ ಜಿಲ್ಲೆಯ ಎಲ್ಲ ಯುವ ಕ್ರಿಕೆಟಿಗರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.