Thursday, November 21, 2024

ರಾಜ್ಯ ಅಥ್ಲೆಟಿಕ್ಸ್‌: ಉಡುಪಿ ಟ್ರ್ಯಾಕ್‌ & ಫೀಲ್ಡ್‌ ಕ್ಲಬ್‌ಗೆ 9 ಪದಕ

ಉಡುಪಿ: ಮಾಜಿ ರಾಷ್ಟ್ರೀಯ ಅಥ್ಲೀಟ್‌ ಜಹೀರ್‌ ಅಬ್ಬಾಸ್‌ ಅವರ ಉಡುಪಿ ಟ್ರ್ಯಾಕ್‌ & ಫೀಲ್ಡ್‌ ಕ್ಲಬ್‌ನ ಅಥ್ಲೀಟ್‌ಗಳು ಮೈಸೂರಿನಲ್ಲಿ ನಡೆದ ಕಿರಿಯರ ಮತ್ತು 23 ವರ್ಷ ವಯೋಮಿತಿಯ ಅಂತರ್‌ ಜಿಲ್ಲಾ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ 9 ಪದಕ ಗೆದ್ದು ಉಡುಪಿಗೆ ಕೀರ್ತಿ ತಂದಿದ್ದಾರೆ. Udupi Track and Field athletes shines at Karnataka state inter district athletic championship.

ಮೈಸೂರು ಜಿಲ್ಲಾ ಅಥ್ಲೆಟಿಕ್ಸ್‌ ಸಂಸ್ಥೆಯ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್‌ ಸಂಸ್ಥೆ ನಡೆಸಿದ ಈ ಚಾಂಪಿಯನ್‌ಷಿಪ್‌ನಲ್ಲಿ ಉಡುಪಿ ಟ್ರ್ಯಾಕ್‌ & ಫೀಲ್ಡ್‌ ಕ್ಲಬ್‌ನ ಅಂಕಿತ್‌ ಜೋಗಿ 20 ವರ್ಷ ವಯೋಮಿತಿಯ ಬಾಲಕರ ವಿಭಾಗದ 200 ಮೀ, ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

20 ವರ್ಷ ವಯೋಮಿತಿಯ ಬಾಲಕರ ಲಾಂಗ್‌ಜಂಪ್‌ನಲ್ಲಿ ಸುನಿಲ್‌ ಸುವರ್ಣ ಕಂಚಿನ ಪದಕ ಗೆದ್ದಿದ್ದಾರೆ. 23 ವರ್ಷ ವಯೋಮಿತಿಯ ಬಾಲಕರ ಸ್ಟೀಪಲ್‌ಚೇಸ್‌ನಲ್ಲಿ ಉಡುಪಿ ಕ್ಲಬ್‌ವ ಪ್ರಯಾಗ್‌ ಸಿ, ಶೆಟ್ಟಿ ಕಂಚಿನ ಪದಕ ಗೆದ್ದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. 18 ವರ್ಷ ವಯೋಮಿತಿಯ ಬಾಲಕರ ಹೆಪ್ಟಾಥ್ಲಾನ್‌ನಲ್ಲಿ ಗಗನ್‌ ಬೆಳ್ಳಿ ಗೆದ್ದರೆ, 20 ವರ್ಷ ವಯೋಮಿತಿಯ ಬಾಲಕರ 400 ಮೀ. ಓಟದಲ್ಲಿ ಕ್ಲಬ್‌ನ ದ್ರುವ ಕಂಚಿನ ಪದಕ ಗೆದ್ದಿದ್ದಾರೆ. 18 ವರ್ಷ ವಯೋಮಿತಿಯ ಬಾಲಕಿಯರ 400 ಮೀ. ಓಟದಲ್ಲಿ ವರ್ಷ ಕಂಚಿನ ಪದಕ ಗೆದ್ದಿದ್ದಾರೆ. 16 ವರ್ಷ ವಯೋಮಿತಿಯ ಬಾಲಕರ ಲಾಂಗ್‌ಜಂಪ್‌ನಲ್ಲಿ ಉಡುಪಿಯ ಮಿಹಿರ್‌ ಕರ್ಕೇರ ಬೆಳ್ಳಿ ಪದಕ ಗೆದ್ದಿದ್ದಾರೆ. 18 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಉಡುಪಿಯ ಚಿರಾಗ್‌ ಡಬಲ್‌ ಪದಕದ ಸಾಧನೆ ಮಾಡಿದ್ದಾರೆ. 100 ಮತ್ತು 200 ಮೀಟರ್‌ ಓಟದಲ್ಲಿ ಚಿರಾಗ್‌ ಕಂಚಿನ ಪದಕ ಗೆದ್ದಿದ್ದಾರೆ.

ಉಡುಪಿ ಟ್ರ್ಯಾಕ್‌ & ಫೀಲ್ಡ್‌ ಕ್ಲಬ್‌ನಿಂದ ಒಟ್ಟು 21 ಅಥ್ಲೀಟ್‌ಗಳು ಅಂತರ್‌ ಜಿಲ್ಲಾ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿದ್ದಾರೆ. ಕೋಚ್‌ ಜಹೀರ್‌ ಅಬ್ಬಾಸ್‌ ರಾಷ್ಟ್ರೀಯ ಮಾಜಿ ಅಥ್ಲೀಟ್‌ ಆಗಿದ್ದು ಕಳೆದ 9 ವರ್ಷಗಳಿಂದ ಉಡುಪಿಯಲ್ಲಿ ಅಥ್ಲೆಟಿಕ್ಸ್‌ ತರಬೇತಿ ನೀಡುತ್ತಿದ್ದಾರೆ. ಇಲ್ಲಿ ತರಬೇತಿ ಪಡೆದ ಅಥ್ಲೀಟ್‌ಗಳು ರಾಷ್ಟ್ರ ಮಟ್ಟದಲ್ಲಿ ಮಿಂಚಿ ಕೆಲವರು ಉತ್ತಮ ಸಾಧನೆ ಮಾಡಿ ಉದ್ಯೋಗವನ್ನೂ ಪಡೆದಿದ್ದಾರೆ.

Related Articles