ಏಜೆನ್ಸೀಸ್ ನ್ಯೂಯಾರ್ಕ್
ಯುಎಸ್ ಓಪನ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಭಾನುವಾರ ನಡೆಯುವ ಫೈನಲ್ ಪಂದ್ಯದಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಕ್ ಹಾಗೂ ಅರ್ಜೆಂಟೀನಾದ ಜುವಾನ್ ಮಾರ್ಟಿನ್ ಡೆಲ್ ಪೊಟ್ರೋ ಪ್ರಶಸ್ತಿಗಾಗಿ ಸೆಣಸಲಿದ್ದಾರೆ.
ಜುವಾನ್ ಡೆಲ್ ಪೊಟ್ರೊ ಕಳೆದ ಒಂಬತ್ತು ವರ್ಷಗಳಲ್ಲಿ ಮೊದಲ ಗ್ರ್ಯಾನ್ ಸ್ಲಾಮ್ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಹೋರಾಟ ನಡೆಸಲಿದ್ದಾರೆ. ಸೆಮಿೈನಲ್ ಪಂದ್ಯದಲ್ಲಿ ಸ್ಪೇನ್ ರೊಲ್ ನಡಾಲ್ ಗಾಯಗೊಂಡು ನಿವೃತ್ತಿ ಹೊಂದಿದ ಕಾರಣ ಡೆಲ್‌ಪೊಟ್ರೋ ಹಾದಿ ಸುಗಮವಾಯಿತು. 7-6,. (7-3), 6-2ರ ಅಂತರದಲ್ಲಿ ಮುನ್ನಡೆಯಲ್ಲಿ ಸಾಗುತ್ತಿರುವಾಗ ನಡಾಲ್ ಸ್ಪರ್ಧೆಯಿಂದ ಹಿಂದೆ ಸರಿದರು.ಹಿಮ್ಮಡಿ ನೋವಿನ ಕಾರಣ ನಡಾಲ್ ಹಿಂದೆ ಸರಿಯಬೇಕಾಯಿತು. 32 ವರ್ಷ ಹಾಗೂ ಅಗ್ರ ಶ್ರೇಯಾಂಕಿತ ನಡಾಲ್ ಪಂದ್ಯದ ನಡುವೆ ಎರಡು ಬಾರಿ ವೈದ್ಯಕೀಯ ನೆರವನ್ನು ಪಡೆದರು. ಆಟದಲ್ಲಿ ಮುಂದುವರಿಯುವುದು ನನಗೆ ಕಷ್ಟವಾಗುತ್ತಿದೆ. ತೀವ್ರವಾದ ನೋವು ನನ್ನನ್ನು ಕಾಡುತ್ತಿದೆ. ಎಂದು ನಡಾಲ್ ಹೇಳಿದ್ದಾರೆ.
2009ರಲ್ಲಿ ಪ್ರಶಸ್ತಿ ಗೆದ್ದಿರುವ ಡೆಲ್ ಪೊಟ್ರೋ 13 ಬಾರಿ ಚಾಂಪಿಯನ್ ಸರ್ಬಿಯಾದ ನೊವಾಕ್ ಜೊಕೋವಿಕ್ ವಿರುದ್ಧ ಸೆಣಸಲಿದ್ದಾರೆ. ಜಪಾನಿನ ಕೀ ನಿಶಿಕೊರಿ ವಿರುದ್ಧದ ಸೆಮಿೈನಲ್ ಪಂದ್ಯದಲ್ಲಿ ಜೊಕೋವಿಕ್ ನೇರ ಸೆಟ್‌ಗಳಿಂದ ಜಯ ಗಳಿಸಿದರು. 6-3, 6-4,6-2 ಸೆಟ್‌ಗಳ ಅಂತರದಲ್ಲಿ ಜೊಕೋವಿಕ್ ಜಯ ಗಳಿಸಿ ಮತ್ತೊಂದು ಗ್ರ್ಯಾನ್ ಸ್ಲಾಮ್ ಕಿರೀಟ ಧರಿಸುವತ್ತ ಹೆಜ್ಜೆ ಇಟ್ಟರು.