ಕರುಣ್ ನಾಯರ್‌ಗೆ 10ಲಕ್ಷ ರೂ. ಬಹುಮಾನ ಘೋಷಿಸಿದ ವಿದರ್ಭ
ನಾಗ್ಪುರ: ವಿದರ್ಭ ರಣಜಿ ತಂಡ ರಣಜಿ ಚಾಂಪಿಯನ್ ಪಟ್ಟ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಕನ್ನಡಿಗ ಕರುಣ್ ನಾಯರ್ ಅವರಿಗೆ ವಿದರ್ಭ ಕ್ರಿಕೆಟ್ ಸಂಸ್ಥೆ 10ಲಕ್ಷ ರೂ. ನಗದು ಬಹುಮಾನವನ್ನು ಘೋಷಿಸಿದೆ. Vidarbha Cricket Association announced Rs 10 lakh to Karun Nair.
ಕರುಣ್ ನಾಯರ್ ತಂಡದ ಪರ 9 ಪಂದ್ಯಗಳನ್ನಾಡಿ 863 ರನ್ ಗಳಿಸಿರುತ್ತಾರೆ. ಅದರಲ್ಲಿ ನಾಲ್ಕು ಶತಕ ಹಾಗೂ ಎರಡು ಅರ್ಧ ಶತಕ ಸೇರಿರುತ್ತದೆ.
ಚಾಂಪಿಯನ್ ತಂಡಕ್ಕೂ ವಿದರ್ಭ ಕ್ರಿಕೆಟ್ ಸಂಸ್ಥೆ 3 ಕೋಟಿ ರೂ. ನಗದು ಬಹುಮಾನ ಪ್ರಕಟಿಸಿದೆ. 69 ವಿಕೆಟ್ ಗಳಿಸಿ ದಾಖಲೆ ಬರೆದಿರುವ ಹರ್ಷ ದುಬೇ ಅವರಿಗೆ 25 ಲಕ್ಷ ರೂ. ಬಹುಮಾನ ಪ್ರಕಟಿಸಿದೆ. ಬಿಸಿಸಿಐ 5 ಕೋಟಿ ರೂ.ಗಳನ್ನು ವಿಜೇತ ವಿದರ್ಭ ತಂಡಕ್ಕೆ ನೀಡಲಿದೆ.