ಮೂರನೇ ಬಾರಿಗೆ ವಿದರ್ಭ ರಣಜಿ ಚಾಂಪಿಯನ್
ನಾಗ್ಪುರ: ಕೇರಳ ತಂಡದ ವಿರುದ್ಧ ಫೈನಲ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ ಡ್ರಾ ಸಾದಿಸಿದ ವಿದರ್ಭ ಕ್ರಿಕೆಟ್ ತಂಡ ಪ್ರಸಕ್ತ ಸಾಲಿನ ರಣಜಿ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. Vidarbha Crowned Ranji Trophy Champions for the third time Kerala’s lucky run finally stopped.
ಕರುಣ್ ನಾಯರ್ (135+86) ಹಾಗೂ ಧನೀಶ್ ಮಾಲೆವರ್ (153+73) ಅವರ ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ಫೈನಲ್ ಪಂದ್ಯದ ಹೈಲೈಟ್ಸ್. ಧನೀಶ್ ಮಾಲೇವರ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು, ಒಟ್ಟು 476 ರನ್ ಹಾಗೂ 69 ವಿಕೆಟ್ ಗಳಿಸಿದ ಹರ್ಷ ದುಬೆ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಗೌರವಕ್ಕೆ ಭಾಜನರಾದರು.
ಮೊದಲ ಇನ್ನಿಂಗ್ಸ್‌ನಲ್ಲಿ 37 ರನ್ ಮುನ್ನಡೆ ಗಳಿಸಿದ್ದು ವಿದರ್ಭದ ಜಯಕ್ಕೆ ವೇದಿಕೆಯಾಗಿತ್ತು. ವಿದರ್ಭ ಮೊದಲ ಇನ್ನಿಂಗ್ಸ್‌ನಲ್ಲಿ 379 ರನ್‌ಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಕೇರಳ ಮೊದಲ ಇನ್ನಿಂಗ್ಸ್‌ನಲ್ಲಿ 342 ರನ್ ಗಳಿಸಿ ಹಿನ್ನಡೆ ಕಂಡಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ವಿದರ್ಭ ಕೊನೆಯ ದಿನದ ಕೊನೆಯ ಸೆಷನ್ ವರೆಗೂ ಬ್ಯಾಟಿಂಗ್ ಮುಂದುವರಿಸಿ 9 ವಿಕೆಟ್ ನಷ್ಟಕ್ಕೆ 375 ರನ್ ಗಳಿಸುವುದರೊಂದಿಗೆ ಪಂದ್ಯ ಡ್ರಾಗೊಂಡಿತ್ತು.
ಕೇರಳ ಈ ಋತುವಿನಲ್ಲಿ ಉತ್ತಮವಾಗಿ ಆಡಿದರೂ ಅದರ ಯಶಸ್ಸು ಅದೃಷ್ಟದಲ್ಲಿಯೇ ಸಾಗಿ ಬಂದಿತ್ತು. ಕ್ವಾರ್ಟರ್ ಫೈನಲ್‌ನಲ್ಲಿ 1 ರನ್ ಅಂತರದಲ್ಲಿ ಮುನ್ನಡೆ, ಸೆಮಿಫೈನಲ್‌ನಲ್ಲಿ 2 ರನ್ ಅಂತರದಲ್ಲಿ ಮುನ್ನಡೆ ಕಂಡಿದ್ದ ಕೇರಳಕ್ಕೆ ಫೈನಲ್‌ನಲ್ಲಿ ಅದೃಷ್ಟ ಕೈಕೊಟ್ಟಿತು.