Sunday, September 8, 2024

ವಾಂಖೆಡೆಯಲ್ಲಿ ಕ್ರಿಕೆಟ್‌ನ ವಿರಾಟ್‌ ಸ್ವರೂಪ!

ಮುಂಬಯಿ: ನ್ಯೂಜಿಲೆಂಡ್‌ ವಿರುದ್ಧದ ವಿಶ್ವಕಪ್‌ ಸೆಮಿಫೈನಲ್‌ ಪಂದ್ಯದಲ್ಲಿ ಭಾರತದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಹಲವು ದಾಖಲೆಗಳನ್ನು ಮುರಿದಿದ್ದಾರೆ. ವಿರಾಟ್‌ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 50ನೇ ಶತಕ ಸಿಡಿಸಿ ಸಚಿನ್‌ ತೆಂಡೂಲ್ಕರ್‌ ಅವರ ದಾಖಲೆಯನ್ನು ಮುರಿದದ್ದು ಐತಿಹಾಸಿಕ ಹೈಲೈಟ್ಸ್‌ Virat Kohli breaks Sachin Tendulkar’s world record hits 50th century.

ಸಚಿನ್‌ ತೆಂಡೂಲ್ಕರ್‌ ಅವರ 49ನೇ ದಾಖಲೆಯನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಸರಿಗಟ್ಟಿದ್ದ ವಿರಾಟ್‌ ಕೊಹ್ಲಿ ವಾಂಖೆಡೆ ಅಂಗಣದಲ್ಲೇ ಸಚಿನ್‌ ತೆಂಡೂಲ್ಕರ್‌ ಅವರ ಸಮ್ಮುಖದಲ್ಲೇ 50 ನೇ ಶತಕ ಸಿಡಿಸಿ ದಾಖಲೆ ಮುರಿದರು.ಇದಕ್ಕೂ ಮುನ್ನ ರೋಹಿತ್‌ ಶರ್ಮಾ 47 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು,. ಆದರೆ ಏಕದಿನ ಕ್ರಿಕೆಟ್‌ನಲ್ಲಿ ಒಂದೇ ಋತುವಿನಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ಮೊದಲ ಆಟಗಾರರೆನಿಸಿ ಎಬಿ ಡಿವಿಲಿಯರ್ಸ್‌ ದಾಖಲೆ ಮುರಿದರು. ಡಿವಿಲಿಯರ್ಸ್‌ 58 ಸಿಕ್ಸರ್‌ ಸಿಡಿಸಿದ್ದರೆ ರೋಹಿತ್‌ 59ನೇ ಸಿಕ್ಸರ್‌ ಸಿಡಿಸಿ ನೂತನ ದಾಖಲೆ ಬರೆದರು. ನಾಯಕನಾಗಿಯೂ ವಿಶ್ವಕಪ್‌ನಲ್ಲಿ ರೋಹಿತ್‌ ಸಿಕ್ಸರ್‌ನಲ್ಲಿ ದಾಖಲೆ ಬರೆದಿದ್ದಾರೆ. 2019ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ತಂಡದ ನಾಯಕ ಇಯಾನ್‌ ಮಾರ್ಗನ್‌ ವಿಶ್ವಕಪ್‌ನಲ್ಲಿ 22 ಸಿಕ್ಸರ್‌ ಸಿಡಿಸಿದ್ದರು, ರೋಹಿತ್‌ 23 ನೇ ಸಿಕ್ಸರ್‌ ಸಿಡಿಸಿ ಆ ದಾಖಲೆಯನ್ನೂ ಮುರಿದರು.

ರೋಹಿತ್‌ ಶರ್ಮಾ ಇದೇ ವೇಳೆ ವಿಶ್ವಕಪ್‌ ಕ್ರಿಕೆಟ್‌ ಇತಿಹಾದಲ್ಲೇ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ಆಟಗಾರರೆನಿಸಿದರು. ಕ್ರಿಸ್‌ ಗೇಲ್‌ ಗಳಿಸಿದ್ದ 49 ಸಿಕ್ಸರ್‌ಗಳ ದಾಖಲೆಯನ್ನು ಮುರಿದ ರೋಹಿತ್‌ ಶರ್ಮಾ 50ನೇ ಸಿಕ್ಸರ್‌ ಸಿಡಿದ ನೂತನ ದಾಖಲೆ ಬರೆದರು. ದಶಕದ ಹಿಂದೆ ಸಚಿನ್‌ ತೆಂಡೂಲ್ಕರ್‌ ಇದೇ ಅಂಗಣದಲ್ಲಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಅದೇ ಅಂಗಣದಲ್ಲಿ ವಿರಾಟ್‌ 117 ರನ್‌ ಗಳಿಸಿ ಸಚಿನ್‌ ಸಮ್ಮುಖದಲ್ಲೇ 50ನೇ ಶತಕ ಸಿಡಿದ್ದು ಅದ್ಭುತ ಸಾಧನೆ. ಈ ದಾಖಲೆಯನ್ನು ಸದ್ಯಕ್ಕೆ ಮುರಿಯುವವರು ಕ್ರಿಕೆಟ್‌ ಜಗತ್ತಿನಲ್ಲಿ ಸದ್ಯಕ್ಕೆ ಯಾರೂ ಇಲ್ಲ. ವಿರಾಟ್‌ ಕೊಹ್ಲಿ 113 ಎಸೆತಗಳನ್ನೆದರುರಿಸಿ 9 ಬೌಂಡರಿ ಹಾಗೂ 2 ಸಿಕ್ಸರ್‌ ಮೂಲಕ 117 ರನ್‌ ಗಳಿಸಿದರು. ಶತಕ ಪೂರ್ಣಗೊಳ್ಳುತ್ತಿದ್ದಂತೆ ಎರಡೂ ಕೈಗಳನ್ನೆತ್ತಿ ಸಚಿನ್‌ ತೆಂಡೂಲ್ಕರ್‌ಗೆ ತಲೆಬಾಗುವ ಮೂಲಕ ವಿರಾಟ್‌ ಗೌರವ ಸಲ್ಲಿಸಿದರು.

Related Articles