Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಆರ್‌ಸಿಬಿಗೆ ಹುಡುಗನಾಗಿ ಬಂದ, ರಾಜನಾಗಿ ಮೆರೆದ ವಿರಾಟ್‌ @ 18

2008ರಲ್ಲಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಆರಂಭವಾದಾಗ ವಿರಾಟ್‌ ಕೊಹ್ಲಿಯನ್ನು 12 ಲಕ್ಷ ರೂ.ಗಳಿಗೆ ಫ್ರಾಂಚೈಸಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಖರೀದಿ ಮಾಡಿತ್ತು. U19 ವಿಶ್ವಕಪ್‌ ಗೆದ್ದ ಸಂಭ್ರಮ ಆಗ ದೇಶದೆಲ್ಲೆಡೆ ಮನೆ ಮಾಡಿತ್ತು. ಕೊಹ್ಲಿಯ ಆಕ್ರಮಣಕಾರಿ ವರ್ತನೆ, ಆಟ ಎಲ್ಲವೂ ಫ್ರಾಂಚೈಸಿ ಮಾಲೀಕ ವಿಜಯ ಮಲ್ಯ ಅವರಿಗೆ ಖುಷಿ ಕೊಟ್ಟಿತ್ತು. 12 ಲಕ್ಷ ರೂ.ಗಳಿಗೆ ಸೇರಿದ ವಿರಾಟ್‌ ಕೊಹ್ಲಿ ಈಗ 21 ಕೋಟಿ ರೂ,ಗಳ ಮೊತ್ತದಲ್ಲಿ ಆಡುತ್ತಿದ್ದಾರೆ. 2025ನೇ ವರ್ಷದ ಮಾರ್ಚ್‌ 11 ರಂದು ವಿರಾಟ್‌ ಕೊಹ್ಲಿ ರಾಯಲ್‌ ಚಾಲೆಂರಜ್ಸ್‌ ತಂಡ ಸೇರಿ 18 ವರ್ಷ ಪೂರ್ಣಗೊಂಡಿತು. ಆರ್‌ಸಿಬಿ ಇದುವರೆಗೂ ಐಪಿಎಲ್‌ ಟ್ರೋಫಿ ಗೆದ್ದಿಲ್ಲ, ಆದರೆ ವಿರಾಟ್‌ ಕೊಹ್ಲಿ ಹಾಗೂ ಅವರ ಅಭಿಮಾನಿಗಳಿಂದಾಗಿ ಇಂದು ಆರ್‌ಸಿಬಿ ಕ್ರೀಡಾ ಜಗತ್ತಿನ ಅತ್ಯಂತ ದೊಡ್ಡ ಬ್ರಾಂಡ್‌ ಆಗಿ ಬೆಳೆದಿದೆ. Virat Kohli Completes 18 Years with RCB, How the boy become King?

ನಮ್ಮ ಸ್ಪೋರ್ಟ್ಸ್‌ ಮೇಲ್‌ ಯೂಟ್ಯೂಬ್‌ ಚಾನೆಲ್‌ಗೆ subscribe ಆಗಿ ಪ್ರೋತ್ಸಾಹಿಸಿ

ಆರ್‌ಸಿಬಿಯಲ್ಲಿ ವಿರಾಟ್‌ ಕೊಹ್ಲಿಯ ಆರಂಭದ ದಿನಗಳು ಉತ್ತಮವಾಗಿರಲಿಲ್ಲ. 13 ಪಂದ್ಯಗಳನ್ನಾಡಿ 165 ರನ್‌ ಗಳಿಸಿದ್ದರು. ಗರಿಷ್ಠ ವೈಯಕ್ತಿಕ ಮೊತ್ತ 38. 2009ರಲ್ಲಿ ಮೊದಲ ಅರ್ಧ ಶತಕ ದಾಖಲಿಸಿದರು. ಶತಕ ಗಳಿಸಲು ಕೊಹ್ಲಿಯ 8 ವರ್ಷಗಳು ಬೇಕಾಯಿತು. 2016ರಲ್ಲಿ ಐಪಿಎಲ್‌ನಲ್ಲಿ ಮೊದಲ ಶತಕ ದಾಖಲಿಸಿದರು. ಈಗ ವಿರಾಟ್‌ ಕೊಹ್ಲಿಯ ಹೆಸರಿನಲ್ಲಿ 8 ಶತಕವಿದೆ, 55 ಅರ್ಧ ಶತಕವಿದೆ, 705 ಬೌಂಡರಿ, 272 ಸಿಕ್ಸರ್‌, 115 ಕ್ಯಾಚ್‌‌ ಕಬಳಿಕೆ. ಒಟ್ಟು 252 ಪಂದ್ಯಗಳಲ್ಲಿ ಗಳಿಸಿದ ಒಟ್ಟು ರನ್‌ 8004. ಅದರಲ್ಲಿ 113* ವೈಯಕ್ತಿಕ ಗರಿಷ್ಠ.

ವಿರಾಟ್‌ ಕೊಹ್ಲಿ ಮೊದಲ ಬಾರಿಗೆ ಐಪಿಎಲ್‌ಗೆ ಕಾಲಿಟ್ಟಾಗ ಅವರ ಆಸ್ತಿಯ ಮೊತ್ತ 50 ಲಕ್ಷ ಎನ್ನುತ್ತಿದ್ದರು. ಈಗ 2025 ಐಪಿಎಲ್‌ನಲ್ಲಿ ಆಡುತ್ತಿರುವಾಗ ಕೊಹ್ಲಿಯ ಒಟ್ಟು ಆದಾಯ 1100 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ವಿರಾಟ್‌ ಕೊಹ್ಲಿಯನ್ನು ಅಂದು ತಿರಸ್ಕರಿಸಿದ ಡೆಲ್ಲಿ ಫ್ರಾಂಚೈಸಿ ಈಗಲೂ ತನ್ನ ಪ್ರಮಾದವನ್ನು ನೆನೆದು ಮರುಗುತ್ತಿದೆ.


administrator