Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಕೊಹ್ಲಿ ಶತಕ ಸಂಭ್ರಮ, ಸಚಿನ್‌ ದಾಖಲೆ ಸರಿಸಮ

ಕೋಲ್ಕೊತಾ: ದಕ್ಷಿಣ ಆಫ್ರಿಕಾ ವಿರುದ್ಧದ ವಿಶ್ವಕಪ್‌ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಶತಕ ಸಿಡಿಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 49ನೇ ಶತಕ ಪೂರ್ಣಗೊಳಿಸಿದರು. ಮಾತ್ರವಲ್ಲ ತಮ್ಮ 35ನೇ ಹುಟ್ಟು ಹಬ್ಬದ ದಿನದಂದೇ ಸಚಿನ್‌ ತೆಂಡೂಲ್ಕರ್‌ ಅವರ 49ನೇ ಶತಕದ ದಾಖಲೆಯನ್ನು ಸರಿಗಟ್ಟಿದರು. Virat Kohli equals Sachin Tendulkar’s record with 49 ODI century.

289ನೇ ಪಂದ್ಯವನ್ನಾಡುತ್ತಿರುವ ಕೊಹ್ಲಿ ಈ ಅದ್ಭುತ ದಾಖಲೆಯನ್ನು ಸರಿಗಟ್ಟಿದರು. “ನನ್ನ ದಾಖಲೆಯನ್ನು ಮುದಿದರೆ ಭಾರತೀಯರೇ ಮುರಿಯಬೇಕು,” ಎಂಬ ಸಚಿನ್‌ ಅವರ ಆಸೆಗೆ ಇನ್ನಿರುವುದು ಒಂದೇ ಶತಕ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 88 ರನ್‌ ಸಿಡಿಸಿ ಕೊಹ್ಲಿ ಶತಕದಿಂದ ವಂಚಿತರಾಗಿದ್ದರು. ಆಗ ವಾಂಖೆಡೆ ಅಂಗಣದಲ್ಲಿ ಸಚಿನ್‌ ಪಂದ್ಯ ವೀಕ್ಷಿಸುತ್ತಿದ್ದರು. ನಂತರ ನ್ಯೂಜಿಲೆಂಡ್‌ ವಿರುದ್ಧ 95 ರನ್‌ ಗಳಿಸಿ ಶತಕದಿಂದ ವಂಚಿತರಾದಾಗ ಕೊಹ್ಲಿ ಅಭಿಮಾನಿಗಳು ಮಾತ್ರವಲ್ಲ ಕ್ರಿಕೆಟ್‌ ಜಗತ್ತೇ ನಿರಾಸೆಯಲ್ಲಿ ಮುಳುಗಿತ್ತು. ಈಗ ಐತಿಹಾಸಿಕ ಈಡನ್‌ ಗಾರ್ಡನ್‌ನಲ್ಲಿ ಕಿಂಗ್‌ ಕೊಹ್ಲಿ ಜನುಮ ದಿನದಂದೇ ಶತಕ ಸಿಡಿಸಿ ಕ್ರಿಕೆಟ್‌ ದೇವರ ದಾಖಲೆಯನ್ನು ಸರಿಗಟ್ಟಿದರು.

463 ಏಕದಿನ ಪಂದ್ಯಗಳನ್ನಾಡಿರುವ ಸಚಿನ್‌ 452 ಇನ್ನಿಂಗ್ಸ್‌ಗಳನ್ನಾಡಿದ್ದರು. ಕೊಹ್ಲಿ 289ನೇ ಪಂದ್ಯವನ್ನಾಡುತ್ತ 277ನೇ ಇನ್ನಿಂಗ್ಸ್‌ನಲ್ಲಿ ಈ ದಾಖಲೆ ಸರಿಗಟ್ಟಿದರು.  


administrator