Friday, November 22, 2024

ಪ್ರೊ ಕಬಡ್ಡಿ ಫೈನಲ್ : ಬೆಂಗಳೂರು ಎದುರಾಳಿ ಗುಜರಾತ್

ಸ್ಪೋರ್ಟ್ಸ್ ಮೇಲ್ ವರದಿ

ಗುಜರಾತ್ ಫಾರ್ಚೂನ್ ಜಯಂಟ್ಸ್ ತಂಡ ಯುಪಿ ಯೋಧಾ  ವಿರುದ್ಧ ನಡೆದ ಎರಡನೇ ಕ್ವಾಲಿಯರ್ ಪಂದ್ಯದಲ್ಲಿ ಜಯ ಗಳಿಸುವುದರೊಂದಿಗೆ ಜನವರಿ 5ರಂದು ಮುಂಬೈಯಲ್ಲಿ ನಡೆಯಲಿರುವ ಪ್ರೊ ಕಬಡ್ಡಿ ಲೀಗ್  ಫೈನಲ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡವನ್ನು ಎದುರಿಸಲಿದೆ.

ಗುಜರಾತ್ ಪಡೆ 38-31 ಅಂತರದಲ್ಲಿ ಯುಪಿ ಯೋಧಾ ವಿರುದ್ಧ ಜಯ ಗಳಿಸಿತು.
10 ಅಂಕ ಗಳಿಸಿದ ಸಚಿನ್ ಗುಜರಾತ್ ತಂಡದ ಜಯದ ರೂವಾರಿ ಎನಿಸಿದರು. ಅದೇ ರೀತಿ ಗುಜರಾತ್‌ನ ಡಿೆನ್ಸ್ ವಿಭಾಗ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿತು. ಯುಪಿ ಯೋಧಾ  ಪಡೆಯ ನಿತೇಶ್ ಕುಮಾರ್ 6 ಟ್ಯಾಕಲ್ ಅಂಕ ಗಳಿಸಿ ಒಟ್ಟು 100 ಅಂಕಗಳ ಸಾಧನೆ ಮಾಡಿದರು. ಪ್ರೊ ಕಬಡ್ಡಿ ಲೀಗ್‌ನ ಒಂದೇ ಋತುವಿನಲ್ಲಿ ಅತಿ ಹೆಚ್ಚು  ಅಂಕ ಗಳಿಸಿದ ಡಿಫೆಂಡರ್  ಎನಿಸಿದರು. ಆದರೆ ತಂಡದ ರೈಡರ್‌ಗಳು ವಿಫಲವಾಗುವುದರೊಂದಿಗೆ ಯೋಧಾ  ಪಡೆ ಟೂರ್ನಿಯಿಂದ ಹೊರ ನಡೆಯಿತು.
ಪಂದ್ಯ ಆರಂಭಗೊಂಡ ಮೊದಲನೇ ನಿಮಿಷದಲ್ಲಿ ಪ್ರಶಾಂತ್ ಕುಮಾರ್ ರೈ ಅವರ ಎರಡು ರೈಡ್ ಪಾಯಿಂಟ್ ಮೂಲಕ ಯೋಧಾ  ಪಡೆ 2-1ರಲ್ಲಿ ಮುನ್ನಡೆ ಕಂಡಿತು. ದಿಟ್ಟ ಉತ್ತರ ನೀಡಿದ ಸಚಿನ್ ಅವರ ರೈಡ್ ಮೂಲಕ ಗುಜರಾತ್ 4-2ರ ಮುನ್ನಡೆ ಕಂಡಿತು. ಮೊದಲ ಐದು ನಿಮಿಷಗಳ ಆಟದಲ್ಲಿ ಯಾವುದೇ ಟ್ಯಾಕಲ್ ಪಾಯಿಂಟ್ ದಾಖಲಾಗಲಿಲ್ಲ. ಇದರೊಂದಿಗೆ ಪಂದ್ಯ 5-5ರಲ್ಲಿ ಸಮಬಲಗೊಂಡಿತು. ಸಮಬಲದಲ್ಲಿ ಸಾಗುತ್ತಿದ್ದ ಪಂದ್ಯಕ್ಕೆ ಗುಜರಾತ್‌ಎದುರಾಳಿ ತಂಡವನ್ನು ಆಲೌಟ್ ಮಾಡುವ ಮೂಲಕ 19-14ರಲ್ಲಿ ಮೇಲುಗೈ ಸಾಧಿಸಿತು.
ದ್ವಿತಿಯಾರ್ಧದ  ಆರಂಭದಲ್ಲಿ ಗುಜರಾತ್ ಉತ್ತಮ ರೀತಿಯ ಆಟ ಪ್ರದರ್ಶಿಸಿತು. ಯುಪಿ ಪಡೆಗೆ ಯಾವುದೇ ರೀತಿಯಲ್ಲಿ ಅಂಕ ಗಳಿಸಲು  ಅವಕಾಶ ನೀಡಲಿಲ್ಲ. ಪಂದ್ಯ 29-14ರಲ್ಲಿ ಸಾಗಿತು.  36ನೇ ನಿಮಿಷದಲ್ಲಿ ಯೋಧಾ  ಪಡೆ ಕೇವಲ 5 ಅಂಕಗಳಲ್ಲಿ ಹಿನ್ನಡೆ ಕಂಡಿತ್ತು. ಆದರೆ ಯಾವುದೇ ಕಾರಣಕ್ಕೂ ಗುಜರಾತ್ ಎದುರಾಳಿಗೆ ಅಂಕ ಗಳಿಸುವ ಅವಕಾಶ ನೀಡಲಿಲ್ಲ. ಪರಿಣಾಮ 38-31ರಲ್ಲಿ ಪಂದ್ಯ ಮುಕ್ತಾಯಗೊಂಡಿತು.

Related Articles