ವಿವಿಎಸ್ ಸರ್ದಾರ್ ಕಾಲೇಜಿಗೆ ನೆಟ್‌ಬಾಲ್ ಚಾಂಪಿಯನ್ ಪಟ್ಟ
ಇತ್ತೀಚಿಗೆ ಕೆಎಲ್‌ಇ ಕ್ರೀಡಾಂಗಣದಲ್ಲಿ ನಡೆದ ಬೆಂಗಳೂರು ಉತ್ತರ ತಾಲೂಕು ಜಿಲ್ಲಾ ಮಟ್ಟದ ಅಂತರ್ ಕಾಲೇಜು ನೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ವಿವಿಎಸ್ ಸರ್ದಾರ್ ಪಟೇಲ್ ಕಾಲೇಜು ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಪಿಯುಸಿ ಕಾಲೇಜಿನ ವಿರುದ್ಧ ೪ ಅಂಕಗಳ ಅಂತರದಲ್ಲಿ ಜಯ ಗಳಿಸಿ ಪ್ರಶಸ್ತಿ ಗೆದ್ದುಕೊಂಡಿತು.
ಆಗಸ್ಟ್ ೩೦ರಂದು ನಡೆದ ಚಾಂಪಿಯನ್‌ಷಿಪ್‌ನ ಸೆಮಿೈನಲ್ ಪಂದ್ಯದಲ್ಲಿ ಒಟ್ಟು ೮ ತಂಡಗಳು ಪಾಲ್ಗೊಂಡಿದ್ದವು. ಫೈನಲ್ ಪಂದ್ಯದಲ್ಲಿ ಸರ್ದಾರ್ ಕಾಲೇಜು ತಂಡ ೧೦-೯ ಅಂತರದಲ್ಲಿ ಜಯ ಗಳಿಸಿತು. ಸೆಮಿಫೈನಲ್ ಪಂದ್ಯದಲ್ಲಿ ವಿವಿಎಸ್ ಸರ್ದಾರ್ ಕಾಲೇಜು ತಂಡ ಎಂಇಎಸ್ ಕಿಶೋರ್ ಕೇಂದ್ರದ ವಿರುದ್ಧ ೧೭-೧ ಅಂತರದಲ್ಲಿ ಜಯ ಗಳಿಸಿತು.
ಫೈನಲ್ ಪಂದ್ಯದಲ್ಲಿ ಕಾವ್ಯ, ಧನ್ಯ, ಪೂಜಾ, ಲಿಪಿಕ, ನವ್ಯತಾ, ಹರ್ಷಿತ, ಲಿಖಿತ (ನಾಯಕಿ) ಉತ್ತಮ ಆಟ ಪ್ರದರ್ಶಿಸಿದರು. ದೈಹಿಕ ಶಿಕ್ಷಕ ರಾಘವ್ ಮಾತೋಡ್ ಹಾಗೂ ಪ್ರಾಂಶುಪಾಲರಾದ ಲಕ್ಷ್ಮೀ ನರಸು ಎನ್.ಎಚ್. ವಿದ್ಯಾರ್ಥಿಗಳಿಗೆ ಶುಭ ಕೋರಿದ್ದಾರೆ.