ಯಲ್ಲಾಪುರ: ದಾವಣಗೆರೆಯಲ್ಲಿ ಐಟಿ ಕಂಪೆನಿಯಲ್ಲಿ ಎಂಜಿನಿಯರ್ ಆಗಿದ್ದ Niranjan Girish Bhat ನಿರಂಜನ್ ಭಟ್ ಅವರಿಗೆ ತಾಂತ್ರಿಕ ಕೆಲಸದಲ್ಲಿ ಕುತೂಹಲ ಇಲ್ಲವೆನಿಸಿತು. ನಿಸರ್ಗದ ಜೊತೆಯಲ್ಲಿ ಬದುಕಬೇಕು. ನಾಲ್ಕು ಜನರಿಗೆ ಈ ಪ್ರಕೃತಿಯನ್ನು ಪರಿಚಯಿಸಬೇಕು. ಹಣ ಗಳಿಸುವುದೇ ಬದುಕಾಗಬಾರದು, ಪ್ರಕೃತಿ ಮತ್ತು ಮನುಷ್ಯ ಪರಸ್ಪರ ಹೊಂದಿಕೊಂಡು ಬದುಕಿದರೇನೇ ಈ ಜಗತ್ತು ಸುಂದರ ಎಂದು ಅರಿತು, ಕೆಲಸವನ್ನು ತೊರೆದು ಪತ್ನಿ ಸೌಮ್ಯಾ ಭಟ್ ಅವರೊಂದಿಗೆ ಹುಟ್ಟು ಹಾಕಿದ, ಈ ರಾಜ್ಯದ ಅತ್ಯಂತ ಅಪೂರ್ವ ಪರಿಸರ ಸ್ನೇಹಿ ಮತ್ತು ಕಾಡಿನ ನಡುವೆಯೇ ಇರುವ ತಾಣ ಯುಕೆ ನೇಚರ್ ಸ್ಟೇ. Want to stay in the forest? please visit UK Nature Sta
ದುಂಬಿಗಳ ಝೇಂಕಾರ, ಹಕ್ಕಿಗಳ ಚಿಲಿಪಿಲಿ ನಿನಾದ, ಹರಿವ ನೀರಿನ ತೊರೆಯ ಸಪ್ಪಳ, ಆಗಸಕ್ಕೆ ಮುತ್ತಿಡಲು ನಾ ಮುಂದು, ತಾ ಮುಂದು ಎನ್ನುವ ಸಾಲು ಮರಗಳು, ಕಸರತ್ತಿಗೆ ಸಾಹಸ ಕ್ರೀಡೆ, ಸಿಂಪಲ್ಲಾಗಿ ಆಡಬೇಕೆಂದರೆ ದೇಸೀಯ ಆಟ, ಆಹಾರದಲ್ಲಿ ವೈವಿಧ್ಯತೆ, ಕಂಪೆನಿಯ ಕಾನ್ಫರೆನ್ಸ್ ಮಾಡಿ, ನಿಸರ್ಗದಲ್ಲೇ ಮದುವೆ ಮಾಡಿ…. ಜೊತೆಯಲ್ಲಿ ನಿರಂಜನ್ ಭಟ್ ಅವರ ಪ್ರೀತಿಯ ಸಲಹೆ, ಅವರ ಪತ್ನಿ ಸೌಮ್ಯ ಭಟ್ ಅವರ ರುಚಿಕರವಾದ ಅಡುಗೆ ಇದೆ. ಬೇಸರದ ಬದುಕಿಗೆ ಟೆನ್ಷನ್ ಯಾಕೆ, ಇದೆಯಲ್ಲ ನೇಚರ್ ಸ್ಟೇ UK ಎನ್ನುತ್ತಾರೆ ನಿರಂಜನ್ ಭಟ್ ದಂಪತಿ. ಸೌಮ್ಯ ಭಟ್ ಅವರು ಕೂಡ ಎಂಕಾಂ ಪದವೀಧರರಾಗಿದ್ದು ನಿಸರ್ಗದ ಮಡಿಲಲ್ಲಿ ಪತಿಯೊಂದಿಗೆ ಈ ಅಪೂರ್ವ ಪ್ರವಾಸೋದ್ಯದಮಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಚಂದಗುಳ್ಳಿಯಲ್ಲಿ ಸುಮಾರು ಹತ್ತು ಎಕರೆ ವಿಸ್ತೀರ್ಣದಲ್ಲಿರುವ ಈ ನಿಸರ್ಗದ ಮನೆಯಲ್ಲಿ ತಂಗಲು ಬಂದವರಿಗೆ ಹತ್ತಿರದ ಮಾಗೋಡ ಜಲಪಾತ ವೀಕ್ಷಣೆ, ಜೇನುಕಲ್ಲುಗುಡ್ಡ ಜಲಪಾತ ವೀಕ್ಷಣೆ, ಕಾಡಿನಲ್ಲಿ ನಡಿಗೆ, ನದಿ ದಾಟುವುದು ಮೊದಲಾದ ಚಟುವಟಿಕೆಗಳು ಪ್ರವಾಸಿಗರನ್ನು ಮುದಗೊಳಿಸುತ್ತವೆ. ಮಳೆಗಾಲದಲ್ಲಿ ಸಾಮಾನ್ಯ ಮಳೆಯ ಅನುಭವ ಸಿಗುತ್ತದೆ ಆದರೆ ಬೇಸಿಗೆಯಲ್ಲಿ? ಆಗಲೂ ನೀವು ಮಳೆಯ ಅನುಭವವನ್ನು ಪಡೆಯಬಹುದು. ಇಲ್ಲಿ ಕೃತಕ ಮಳೆಹನಿಯ ವ್ಯವಸ್ಥೆ ಮಾಡಲಾಗಿದೆ. ಅದ್ಭುತವಾದ ಈಜುಕೊಳವಿದೆ.
ದೇಶೀಯ ಕ್ರೀಡೆಗಳಿಗೆ ಇಲ್ಲಿ ಹೆಚ್ಚು ಒತ್ತು ನೀಡಲಾಗುತ್ತದೆ. ಯಾವುದೇ ರೀತಿಯ ಆಟಕ್ಕೆ ಇಲ್ಲಿ ಉತ್ತಮವಾದ ಒಂದು ಅಂಗಣವಿದೆ. ದೇಸೀಯ ಆಹಾರ ಸಿಗುತ್ತದೆ.
ಮರ ಕಡಿಯದೆ ಮರದ ನಡುವೆ ಬದುಕು:
ಸಾಮಾನ್ಯವಾಗಿ ಕಾಡಿನ ನಡುವೆ ಬದುಕನ್ನು ಕಟ್ಟಿಕೊಳ್ಳಬೇಕಾದರೆ ಮನುಷ್ಯ ತನ್ನ ಜಾಗಕ್ಕಾಗಿ ಮರವನ್ನು ಕಡಿಯುತ್ತಾನೆ. ಆದರೆ UK Nature Stay ನಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಲಾಗಿದೆ. “ಒಂದು ಗಿಡವನ್ನು ರಕ್ಷಿಸಲು ನಾಲ್ಕೈದು ದೊಡ್ಡ ಗಿಡಗಳನ್ನು ಕಡಿದು ಅದಕ್ಕೆ ಬೇಲಿ ಕಟ್ಟುತ್ತಾರೆ. ಇಲ್ಲಿ ಯಾವುದೇ ಮರಗಳಿಗೆ ಹಾನಿ ಮಾಡದೆ ನಾವು ಬದುಕನ್ನು ಕಟ್ಟಿಕೊಂಡು ಇತರರು ಬಂದು ನೆಮ್ಮದಿಯಾಗಿ ಉಳಿದು ಹೋಗುವ ವ್ಯವಸ್ಥೆಯನ್ನು ಮಾಡಿದ್ದೇವೆ. ನಮ್ಮ ಬದುಕಿನ ಆಯ್ಕೆ ಖುಷಿಕೊಟ್ಟಿದೆ. ಇಲ್ಲಿ ಖರ್ಚು ವೆಚ್ಚಗಳೇ ಇಲ್ಲ. ಇಬ್ಬರೂ ಆರೋಗ್ಯವಾಗಿ ನೆಮ್ಮದಿಯಿಂದ ಬದುಕುತ್ತಿದ್ದೇವೆ, ಹಣ ಮಾಡುವುದು ನಮ್ಮ ಉದ್ದೇಶವಲ್ಲ. ಹಾಗಾಗಿರುತ್ತಿದ್ದರೆ ಇದ್ದ ಕೆಲಸವನ್ನು ಬಿಟ್ಟು ಬರುತ್ತಿರಲಿಲ್ಲ. ಇಲ್ಲಿ ಕನ್ನಡದ ನಾಲ್ಕು ಸಿನಿಮಾಗಳ ಚಿತ್ರೀಕರಣ ನಡೆದಿದೆ, ನಾನು ಇನ್‌ಸ್ಪೆಕ್ಟರ್ ಆಗಿ ನಟನೆ ಮಾಡಿರುವೆ. ಸ್ಯಾಂಡಲ್‌ವುಡ್‌ನ ಅನೇಕ ಪ್ರಮುಖ ನಟರು ಇಲ್ಲಿಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರವಿಚಂದ್ರನ್ ಅವರಂತೂ ಇಲ್ಲಿಯ ನಿಸರ್ಗದ ಶ್ರೀಮಂತಿಕೆ ಕಂಡು ಬೆರಗಾಗಿದ್ದಾರೆ,” ಎಂದು ನಿರಂಜನ್ ಗಿರೀಶ್ ಭಟ್ ಹೇಳಿದ್ದಾರೆ.
ಶಾಲಾ ಮಕ್ಕಳಿಗೆ, ಕಾರ್ಪೊರೇಟ್ ವಲಯಕ್ಕೆ ಉತ್ತಮ ಪ್ರವಾಸ ತಾಣ: ಶಾಲಾ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಪ್ರವಾಸದ ಹೆಸರಿನಲ್ಲಿ ದೇವಸ್ಥಾನಗಳಿಗೆ ಕರೆದೊಯ್ದು, ಊಟ ಮಾಡಿ ಮನೆಗೆ ಬರುವುದರಲ್ಲೇ ಹೆಚ್ಚಿನ ಶಾಲೆಗಳ ಶೈಕ್ಷಣಿಕ ಪ್ರವಾಸ ಕೊನೆಗೊಳ್ಳುತ್ತದೆ. ದೇವಸ್ಥಾನಗಳನ್ನು ಮುಂದೆಯೂ ನೋಡಬಹುದು. ಆದರೆ ಈಗ ನಮಗೆ ಬೇಕಾಗಿರುವುದು ಪರಿಸರದ ಅರಿವು. ಪರಿಸರವನ್ನು ಸಂರಕ್ಷಿಸುವ ಬಗೆ ಇವುಗಳ ಬಗ್ಗೆ ತಿಳಿಸಲು ಇಂಥಹ ಸ್ಥಳಿಗಳಿಗೆ ಕರೆದೊಯ್ಯಬೇಕು. ಇಲ್ಲಿ ಕನಿಷ್ಠ 200 ಪ್ರವಾಸಿಗರಿಗೆ ಉಳಿದುಕೊಳ್ಳುವ ವ್ಯವಸ್ಥೆ ಇದೆ. ಕಾರ್ಪೋರೇಟ್ ಸೆಮಿನಾರ್‌ಗಳಿಗೆ ಇದು ಹೇಳಿ ಮಾಡಿಸಿದ ತಾಣ. ಪರಿಸರದ ನಡುವೆ ಕಡಿಮೆ ಜನರ ಸಮ್ಮುಖದಲ್ಲಿ ವಿವಾಹವಾಗಬೇಕೆಂಬ ಹಂಬಲವಿದೆಯೇ ಹಾಗಿದ್ದರೆ ಇಲ್ಲಿ ಅದಕ್ಕೂ ಅವಕಾಶ ಇದೆ. ಇಲ್ಲಿ ಆರೋಗ್ಯ ಶಿಬಿರಗಳನ್ನೂ ನಡೆಸಲು ಅವಕಾಶವಿದೆ. ಕಾಂಕ್ರೀಟು ಕಾಡಿನ ನಡುವೆ ಬದುಕುತ್ತ, ಪರಿಸರದ ಬಗ್ಗೆ ಕವನ ರಚಿಸಿ ಅಲ್ಲೇ ಕವಿತೆ ಓದಿ ಪರಿಸರ ಕವಿ ಎನಿಸಿಕೊಂಡವರರೂ ಇಲ್ಲಿಗೆ ಬಂದು ಕವಿಗೋಷ್ಠಿ ನಡೆಬಹುದು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾಡ್ಜ್‌ಗಳನ್ನು ತರೆದು, ಬಾರ್‌ಗಳನ್ನು ನಡೆಸುವವರಿಗೆ ಸರಕಾರ ಪ್ರವಾಸೋದ್ಯಮದ ಹೆಸರಿನಲ್ಲಿ ಸಬ್ಸಿಡಿಗಳನ್ನು ನೀಡುತ್ತಿದೆ. ಆದರೆ ಇಂಥಹ ಸಾಮಾಜಿಕ ಮತ್ತು ಪರಿಸರ ಕಾಳಜಿ ಹೊಂದಿರುವವರು ನಡೆಸುತ್ತಿರುವ ನೈಜ ಪ್ರವಾಸೋದ್ಯಮಕ್ಕೆ ಸರಕಾರ ನೆರವು ನೀಡುವ ಅಗತ್ಯವಿದೆ.
ವಿವರಗಳಿಗೆ ಸಂಪರ್ಕಿಸಿ: 9449567673