Thursday, September 19, 2024

ಪಾಕಿಸ್ತಾನ ಆಟಗಾರರು ಚೀನಾಕ್ಕೆ ಬೆಂಬಲಿಸಿದ್ದೇಕೆ?

ಹೊಸದಿಲ್ಲಿ: ಭಾರತ ಹಾಗೂ ಚೀನಾ ತಂಡಗಳ ನಡುವೆ ಏಷ್ಯನ್‌ ಹಾಕಿ ಚಾಂಪಿಯನ್‌ಷಿಪ್‌ ಫೈನಲ್‌ ಪಂದ್ಯ ನಡೆಯುವಾಗ ಮೂರನೇ ಸ್ಥಾನ ಪಡೆದ ಪಾಕಿಸ್ತಾನದ ಆಟಗಾರರು ಚೀನಾದ ಧ್ವಜ ಹಿಡಿದು ಆತಿಥೇಯ ರಾಷ್ಟ್ರಕ್ಕೆ ಬೆಂಬಲ ನೀಡಿರುವ ಚಿತ್ರ ಈಗ ವೈರಲ್‌ ಆಗಿದೆ. Why Pakistan player hold China flag during Asian Champions Trophy hockey final against India.

ಭಾರತ ಹಾಗೂ ಚೀನಾದ ವಿರುದ್ಧ ಸೋಲುಂಡ ಪಾಕಿಸ್ತಾನ ತಂಡಕ್ಕೆ ಭಾರತ ಗೆಲ್ಲುವುದನ್ನು ಸಭಾರತದಹಿಸಲು ಆಗುತ್ತಿಲ್ಲ. ಭಾರತದ ವಿರುದ್ಧ ಆಡುವಾಗಲೂ ಇತ್ತಂಡಗಳ ಆಟಗಾರರ ನಡುವೆ ಮಾತಿನ ಚಕಮಕಿ ಉಂಟಾಗಿತ್ತು. ಕ್ರೀಡೆಯಲ್ಲಿ ಸೇಡು ತೀರಿಸಿಕೊಳ್ಳುವುದಾದರೆ ಅದು ಅಂಗಣಲ್ಲಿ ಮಾತ್ರವಾಗಬೇಕು. ಅಂಗಣದ ಹೊರಗೆ ನೀವು ಯಾವ ತಂಡಕ್ಕಾದರೂ ಬೆಂಬಲ ನೀಡಿ ಅದು ನಿಮ್ಮ ಇಷ್ಟ. ಆದರೆ ಒಂದು ತಂಡದ ಆಟಗಾರರು ಈ ರೀತಿಯಲ್ಲಿ ಪ್ಲಾಸ್ಟಿಕ್‌ ಧ್ವಜ ಹಿಡಿದು ಮಕ್ಕಳ ಹಾಗೆ ವರ್ತಿಸುವುದು ಅವರ ಘನತೆಗೆ ತಕ್ಕುದಾದುದಲ್ಲ.

ಪಾಕಿಸ್ತಾನ ಯಾರನ್ನೇ ಬೆಂಬಲಿಸಲಿ ಭಾರತದ ಸಾಮರ್ಥ್ಯಕ್ಕೆ ಈ ಏಷ್ಯಾ ಖಂಡದಲ್ಲಿ ಸರಿಸಮಾನರು ಯಾರೂ ಇಲ್ಲ ಎಂಬುದನ್ನು ನಮ್ಮ ಆಟಗಾರರು ತೋರಿಸಿದ್ದಾರೆ. ಐದನೇ ಬಾರಿಗೆ ಭಾರತ ತಂಡ ಏಷ್ಯನ್‌ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದೆ.

ಭಾರತ ಹಾಗೂ ಪಾಕಿಸ್ತಾನ ಪ್ರತಿಯೊಂದು ಕ್ರೀಡೆಯಲ್ಲೂ ಸಾಂಪ್ರದಾಯಿಕ ಎದುರಾಳಿಗಳು. ಭಾರತ ಅಂಗಣದಲ್ಲಿ ಪಾಕಿಸ್ತಾನಕ್ಕೆ ಯಾವಾಗಲೂ ಗೌರವ ನೀಡುತ್ತಲೇ ಬಂದಿದೆ. ಆದರೆ ಈ ಪಾಕಿಸ್ತಾನ ಆಟಗಾರರು ಕ್ರೀಡಾಮನೋಭಾವವನ್ನು ತೊರೆದು ಅಸಭ್ಯವಾಗಿ ವರ್ತಿಸುತ್ತಾರೆ. ಅವರಿಗೆ ತರಬೇತಿ ನೀಡುವ ಕೋಚ್‌, ಪಾಕ್‌ ಹಾಕಿ ಫೆಡರೇಷನ್‌ನ ಪ್ರಮುಖರಿಗೆ ಇಂಥ ಅಸಭ್ಯಗಳನ್ನು ನಿಯಂತ್ರಿಸಲು ಆಗುತ್ತಿಲ್ಲ. ಪಾಕಿಸ್ತಾನದ ಆಟಗಾರರು ಅಂಗಣದ ಹೊರಗಡೆ ಯಾವುದೇ ರೀತಿಯಲ್ಲಿ ವರ್ತಿಸಲಿ, ಆದರೆ ಭಾರತ ಮಾತ್ರ ಎಲ್ಲಿ ಸೇಡು ತೀರಿಸಿಕೊಳ್ಳಬೇಕೋ ಅಲ್ಲಿ ಸೇಡು ತೀರಿಸಿಕೊಂಡು ಚಾಂಪಿಯನ್‌ ಆಗಿ ಹೊರಹೊಮ್ಮುತ್ತದೆ.

Related Articles