Monday, September 16, 2024

ಗ್ರೀಸ್‌ ದೇಶಕ್ಕೆ ಹೊರಟ ಚಾಂಪಿಯನ್‌ ಸುರೇಶ್‌ಗೆ ನೆರವಿನ ಅಗತ್ಯವಿದೆ

Sportsmail Desk:  ಕಳೆದ ವರ್ಷ ಮಲೇಷ್ಯಾದಲ್ಲಿ ನಡೆದ ವಿಶ್ವ ಆರ್ಮ್‌ ರೆಸ್ಲಿಂಗ್‌ ಚಾಂಪಿಯನ್‌ಷಿಪ್‌ನ World Arm Wrestling Championship ವಿಶೇಷ ಚೇತನರ ವಿಭಾಗದಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿ ಎರಡು ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದ ಉಡುಪಿ ಜಿಲ್ಲೆಯ ಸಾಸ್ತಾನ ಪಾಂಡೇಶ್ವರದ ಸಾಧಕ ಸುರೇಶ್‌ ಪೂಜಾರಿ ಅವರು ಈ ಬಾರಿ ಗ್ರೀಸ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿದ್ದಾರೆ. ಆದರೆ ಆರ್ಥಿಕ ಸಮಸ್ಯೆಯಿಂದ ಅವರು ಈ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವುದು ಅಸಾಧ್ಯವಾಗುತ್ತಿದೆ. ಈ ಕಾರಣಕ್ಕಾಗಿ ಅವರು ಕ್ರೀಡಾಭಿಮಾನಿಗಳಲ್ಲಿ ನೆರವಿನ ಹಸ್ತ ಚಾಚಿದ್ದಾರೆ. World Arm Wrestling Champion Suresh Poojary need financial supports for participating at World Championship to be held in Greece. ಗ್ರೀಸ್‌ನ ಪೆಲೊಪ್ಪೆನೀಸ್‌ನಲ್ಲಿರುವ ಲಾತ್ರಕಿಯಲ್ಲಿ ಸೆಪ್ಟೆಂಬರ್‌ 30ರಿಂದ ಅಕ್ಟೋಬರ್‌ 6 ರವರೆಗೆ ಚಾಂಪಿಯನ್‌ಷಿಪ್‌ ನಡೆಯಲಿದೆ.

ನೆರವು ನೀಡುವವರು: ಸುರೇಶ್‌ ಅವರ ಖಾತೆಯ ವಿವರ

Name: Suresh B. Account No: 0032500100625301 Bank: Karnataka Bank, Airody Branch IFSC CODE: KARB0000003

“ನನ್ನ ತೋಳು ಬಲಿಷ್ಠವಾಗಿದೆ. ಆದರೆ ಆರ್ಥಿಕವಾಗಿ ದುರ್ಬಲನಾಗಿರುವೆ. ಕಳೆದ ವರ್ಷ ಕ್ರೀಡಾಭಿಮಾನಿಗಳ ಪ್ರೋತ್ಸಾಹದಿಂದ ಮಲೇಷ್ಯಾದಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡು ಬಲಗೈ ಮತ್ತು ಎಡಗೈ ಎರಡೂ ವಿಭಾಗಗಳಲ್ಲಿ ಚಿನ್ನ ಗೆದ್ದಿರುವೆ. ಈ ಬಾರಿಯೂ ಉತ್ತಮ ರೀತಿಯಲ್ಲಿ ಅಭ್ಯಾಸ ನಡೆಸುತ್ತಿದ್ದು, ಮತ್ತೆ ಚಿನ್ನದ ಸಾಧನೆ ಮಾಡುತ್ತೇನೆಂಬ ಆತ್ಮವಿಶ್ವಾಸವಿದೆ. ಬಡ ಕುಟುಂಬದಿಂದ ಬಂದಿರುವ ನನಗೆ ಈ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಆರ್ಥಿಕ ಸಮಸ್ಯೆ ಎದುರಾಗಿದೆ. ಅದಕ್ಕಾಗಿ ಕ್ರೀಡಾಭಿಮಾನಿಗಳಲ್ಲಿ ನೆರವಿಗಾಗಿ ಕೈ ಚಾಚಿರುವೆ,” ಎಂದು ಸುರೇಶ್‌ ಪೂಜಾರಿ ಅವರು www.sportsmail.net ಮೂಲಕ ವಿನಂತಿ ಮಾಡಿಕೊಂಡಿದ್ದಾರೆ.

ಚಿನ್ನ ಗೆದ್ದ ಮೊದಲ ಕನ್ನಡಿಗ: ಕೂಲಿ ಕುಟುಂಬದಿಂದ ಬಂದಿರುವ ಸುರೇಶ್‌ ಪೂಜಾರಿ ಅಂಗವೈಕಲ್ಯದ ನಡುವೆಯೂ ತನ್ನ ತೋಳ್ಬಲದಲ್ಲಿ ಯಾವುದೇ ವೈಕಲ್ಯ ಇಲ್ಲ ಎಂಬುದನ್ನು ಜಗತ್ತಿಗೆ ಸಾರಿದ್ದಾರೆ, ವಿಶೇಷ ಚೇತನರ ವಿಭಾಗದಲ್ಲಿ ಜಾಗತಿಕ ಮಟ್ಟದಲ್ಲಿ 2 ಚಿನ್ನ ಗೆದ್ದ (ಬಲ & ಎಡಗೈ) ಕರ್ನಾಟಕದ ಮೊದಲ ಪಂಜ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೂಲಿ ಮಾಡುವ ತಾಯಿ, ಹೃದಯಾಘಾತವಾಗಿ ದುಡಿಯಲಾಗದ ತಂದೆ ಇವರ ಆರೈಕೆ ಮಾಡುವ ಜವಾಬ್ದಾರಿಯೂ ಸುರೇಶ್‌ ಅವರ ಮೇಲಿದೆ.

ಸರಕಾರ ಯಾಕೆ ನೆರವು ನೀಡುತ್ತಿಲ್ಲ?:  ಇಂಥ ಜಾಗತಿಕ ಮಟ್ಟದ ಕ್ರೀಡಾಕೂಟಗಳಿಗೆ ರಾಜ್ಯ ಅಥವಾ ಕೇಂದ್ರ ಸರಕಾರಗಳು ನೆರವು ನೀಡುವುದಿಲ್ಲ ಯಾಕೆ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಇದು ಆರ್ಮ್‌ ರೆಸ್ಲಿಂಗ್‌ ಫೆಡರೇಷನ್‌ಗಳು ಮಾಡಿಕೊಂಡ ಸಮಸ್ಯೆ. ಭಾರತದಲ್ಲಿ ಒಟ್ಟು ಮೂರು ಫೆಡರೇಷನ್‌ಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಸದ್ಯ ಅಂತಾರಾಷ್ಟ್ರೀಯ ಆರ್ಮ್‌ ರೆಸ್ಲಿಂಗ್‌ ಫೆಡರೇಷನ್‌ International Federation of Arm wrestling IFA ನಿಂದ ಮತ್ತು ಏಷ್ಯನ್‌ ಆರ್ಮ್‌ ರೆಸ್ಲಿಂಗ್‌ ಫೆಡರೇಷನ್‌ನಿಂದ AFA ಮಾನ್ಯತೆ ಪಡೆದ ಸಂಸ್ಥೆ ಭಾರತೀಯ ಆರ್ಮ್‌ ರೆಸ್ಲಿಂಗ್‌ ನಿಯಂತ್ರಣ ಮಂಡಳಿ Board of Control for Armwrestling in India ಕಾನೂನಿನ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ವಿಮಲ್‌ ಗೋಪಿನಾಥ್‌ ಹೇಳಿದ್ದಾರೆ.

ಕೇಂದ್ರ ಕ್ರೀಡಾ ಇಲಾಖೆಯಲ್ಲಿ ನೋಂದಾವಣೆ ಆದ ಬಳಿಕ ನಮ್ಮ ಕ್ರೀಡಾಪಟುಗಳಿಗೆ ಸರಕಾರದಿಂದ ನೆರವು ಸಿಗಲಿದೆ. ಅಲ್ಲಿಯ ತನಕ ಕ್ರೀಡಾಭಿಮಾನಿಗಳು ಮತ್ತು ಪ್ರಾಯೋಜಕರ ನೆರವಿನಿಂದ ವಿವಿಧ ಚಾಂಪಿಯನ್‌ಷಿಪ್‌ಗಳಲ್ಲಿ ಪಾಲ್ಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ವಿಮಲ್‌ ಗೋಪಿನಾಥ್‌ Vimal Gopinath ಹೇಳಿದ್ದಾರೆ.

Related Articles