Friday, November 22, 2024

ವಿಶ್ವ ಜೂನಿಯರ್ ಕುಸ್ತಿ: ಮಾನಸಿ, ಅಂಶುಗೆ ಪದಕ

ಸ್ಪೋರ್ಟ್ಸ್ ಮೇಲ್ ವರದಿ 

ಸ್ಲೋವಾಕಿಯಾದಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್ ಷಿಪ್ ನಲ್ಲಿ ಭಾರತದ ಭಾರತದ ಅಂಶು ಮಲಿಕ್  ಹಾಗೂ ಮಾನಸಿ ಕಂಚಿನ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ.

59 ಕೆ ಜಿ  ವಿಭಾಗದಲ್ಲಿ ಅಂಶು ಮಲಿಕ್ ಹಾಗೂ 57 ಕೆ ಜೆ ಬಾಲಕಿಯಯರ ವಿಭಾಗದಲ್ಲಿ  ಮಾನಸಿ ಕಂಚಿನ ಪದಕ ಗೆದ್ದರು.

ಕನ್ನಡಿಗನ ಶ್ರಮ

ಜಾಗತಿಕ ಮಟ್ಟದಲ್ಲಿ ದೊರೆತ ಈ ಪದಕದ ಹಿಂದೆ ಕನ್ನಡಿಗರ ಶ್ರಮ ಇರುವುದು ಹೆಮ್ಮೆಯ ಸಂಗತಿ. ರಾಮ್ ಬುಡಕಿ ಹಾಗೂ ಶ್ಯಾಮ್ ಬುಡಕಿ ಅವಳಿ ಸಹೋದರರು. ಈಗ ಪಟಿಯಾಲದ ಎನ್ ಐಎಸ್ ನಲ್ಲಿ ಕುಸ್ತಿ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಲವಾರು ಕುಸ್ತಿ ಪಟುಗಳಿಗೆ ತರಬೇತಿ ನೀಡಿರುವ ಈ ಸಹೋದರರು ಭಾರತದ ಕುಸ್ತಿ ಪಟುಗಳು ಅಂತಾರಾಷ್ಟ್ರೀಯ ಮಟ್ಟದ ಕುಸ್ತಿಯಲ್ಲಿ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ.

Related Articles