ದುಬೈ:
ಭಾರತದ ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಏಕದಿನ ಮಾದರಿಯ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಐಸಿಸಿ ರ್ಯಾಂಕಿಂಗ್ ನಲ್ಲಿ ಅಗ್ರ 10ರೊಳಗೆ ಸ್ಥಾನ ಪಡೆದಿದ್ದಾರೆ. ಇನ್ನೂ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಮಾದರಿಯಲ್ಲಿ ಕಳಪೆ ಬ್ಯಾಟಿಂಗ್ ಮಾಡಿದ ಎಡಗೈ ಬ್ಯಾಟ್ಸ್ ಮನ್ ಶಿಖರ್ ಧವನ್ ನಾಲ್ಕು ಸ್ಥಾನಗಳು ಕುಸಿತ ಕಂಡಿದ್ದಾರೆ.
ಇನ್ನೂ ರನ್ ಮಿಷನ್ ವಿರಾಟ್ ಕೊಹ್ಲಿ ವಿಂಡೀಸ್ ವಿರುದ್ಧ ಏಕದಿನ ಸರಣಿಯಲ್ಲಿ ಒಟ್ಟು 453 ವೈಯಕ್ತಿಕ ರನ್ ಸಿಡಿಸುವ ಮೂಲಕ ಏಕದಿನ ಮಾದರಿಯಲ್ಲಿ ಅತಿ ವೇಗವಾಗಿ 10 ಸಾವಿರ ರನ್ ಪೂರೈಸಿದ ಕೀರ್ತಿಗೆ ಭಾಜನರಾದರು. ಆ ಮೂಲಕ ಅವರು ಐಸಿಸಿ ಶ್ರೇಯಾಂಕದಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ. ಆರಂಭಿಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಅವರು, ಕಳೆದ ಸರಣಿಯಲ್ಲಿ ಒಟ್ಟು 389 ರನ್ ಗಳಿಸುವ ಮೂಲಕ ಒಟ್ಟು 879 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ಕಳಪೆ ಪಾರ್ಮ್ ನಲ್ಲಿರುವ ಧವನ್ ನಾಲ್ಕು ಸ್ಥಾನಗಳು ಕುಸಿದು ಒಂಬತ್ತನೇ ರ್ಯಾಂಕಿಂಗ್ ಗೆ ಇಳಿದಿದ್ದಾರೆ. ಚಾಹಲ್ ಬೌಲಿಂಗ್ ರ್ಯಾಂಕಿಂಗ್ ನಲ್ಲಿ ಎಂಟನೇ ಸ್ಥಾನದಲ್ಲಿದ್ದಾರೆ. ಭಾರತದ ಜಸ್ಪ್ರಿತ್ ಬುಮ್ರಾ ಅವರು ಅಗ್ರ ಕ್ರಮಾಂಕ ಅಲಂಕರಿಸಿದ್ದಾರೆ.