Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಜೊಡಿಯಾಕ್‌ ಕ್ರಿಕೆಟ್‌ ಕ್ಲಬ್‌ಗೆ ಜೆಬಿ ಮಲ್ಲಾರಾಧ್ಯ ಶೀಲ್ಡ್‌

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಆಶ್ರಯದಲ್ಲಿ  ಜೆಬಿ ಮಲ್ಲಾರಾಧ್ಯ ಶೀಲ್ಡ್‌ಗಾಗಿ ನಡೆದ ಕೆಎಸ್‌ಸಿಎ ಗ್ರೂಪ್‌ I -V ಡಿವಿಜನ್‌ ಲೀಗ್‌ ಹಾಗೂ ನಾಕೌಟ್‌ ಮಾದರಿಯ ಟೂರ್ನಿಯಲ್ಲಿ ಜೊಡಿಯಾಕ್‌ ಕ್ರಿಕೆಟ್‌ ಕ್ಲಬ್‌ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದೆ.

ಆರ್‌ಎಸ್‌ಐ ಅಂಗಣದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಜೊಡಿಯಾಕ್‌ ಕ್ರಿಕೆಟ್‌ ಕ್ಲಬ್‌ ತಂಡ ಫ್ರೆಂಡ್ಸ್‌ ಯೂನಿಯನ್‌ ಕೆಜಿಎಫ್‌ ವಿರುದ್ಧ 50 ರನ್‌ ಅಂತರದಲ್ಲಿ ಜಯ ಗಳಿಸಿ ಪ್ರಶಸ್ತಿ ಗೆದ್ದುಕೊಂಡಿತು.  Zodiac Cricket Club winners at KSCA J B Mallaradhya Shield Cricket Tournament.

ಮೊದಲು ಬ್ಯಾಟಿಂಗ್‌ ಮಾಡಿದ ಜೊಡಿಯಾಕ್‌ ಪರ ಗ್ನಾನೆ (84) ಹಾಗೂ ಪವನ್‌ ಯಾದವ್‌‌ (76) ಅವರ ಆಕರ್ಷಕ ಅರ್ಧ ಶತಕದ ನೆರವಿನಿಂದ ತಂಡ 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 268 ರನ್‌ ಗಳಿಸಿತು. ಎಂ ಕೃಷ್ಣ 44 ರನ್‌ ಗಳಿಸಿ ತಂಡದ ಸವಾಲಿನ ಮೊತ್ತಕ್ಕೆ ನೆರವಾದರು. ಫ್ರೆಂಡ್ಸ್‌ ಯೂನಿಯನ್‌ ಪರ ಚೇತನ್‌ ಬಿಎಸ್‌ 46 ರನ್‌ಗೆ 3 ಹಾಗೂ ನವೀನ್‌ ಕೃಷ್ಣ 31 ರನ್‌ಗೆ 2 ವಿಕೆಟ್‌ ಗಳಿಸಿದರು.

269 ರನ್‌ ಜಯದ ಗುರಿ ಹೊತ್ತ ಫ್ರೆಂಡ್ಸ್‌ ಯೂನಿಯನ್‌ 44.5 ಓವರ್‌ಗಳಲ್ಲಿ 218 ರನ್‌ ಗಳಿಸುವಷ್ಟರಲ್ಲಿ ಸರ್ವ ಪತನ ಕಂಡಿತು. ಅರ್ಜುನ್‌ ಕೆ ವೈ 61 ರನ್‌ ಗಳಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ. ನಿತೀಶ್‌ ದಹಿಯಾ 25, ರಾಜೇಶ್‌ ಎಂ 31, ಗಂಗಾಧರ್‌ ಆರ್‌. 30 ಅವರ ಪ್ರಯತ್ನ ಜಯ ತರಲಿಲ್ಲ. ಜೊಡಿಯಾಕ್‌ ಪರ ಬಾಲು ದಿಲೀಪ್‌ ಕುಮಾರ್‌ 46 ಕ್ಕೆ 2, ಶೊಯೇಬ್‌ ಪಾಶಾ 43ಕ್ಕೆ 4 ವಿಕೆಟ್‌ ಗಳಿಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು.

ನಿಂತವರು (ಎಡದಿಂದ ಬಲಕ್ಕೆ): ವಶಿಷ್ಠ ಮಯ್ಯ, ಎಂ. ಕಾರ್ತಿಕ್‌, ಚೇತನ್‌, ಅಭಿಷೇಕ್‌, ಸೂರಜ್‌ ಸ್ಟೀಫನ್‌, ಗ್ನಾನೆ, ಯು ಮಣಿಕಂಠ, ಪವನ್‌ ಯಾದವ್‌, ಎಂ. ಆರ್‌. ಮಹೇಶ್‌ ರೆಡ್ಡಿ,  ಸಂಜಯ್‌ ವಿ.

ಕುಳಿತವರು (ಎಡದಿಂದದ ಬಲಕ್ಕೆ): ಶೊಯೇಬ್‌ ಪಾಶಾ, ಗೌರವ್‌ ಬಬ್ಬರ್‌, ಸಂದೀಪ್‌ ಕುಮಾರ್‌ ಆರ್‌. (ನಾಯಕ), ವೆಂಕಟೇಶ್‌ ಮಯ್ಯ (ಕಾರ್ಯದರ್ಶಿ), ಬಂದಾ ಶ್ರೀನಿವಾಸ್‌, ಬಾಲು ದಿಲೀಪ್‌ ಕುಮಾರ್‌, ಸುನಿಲ್‌ ಕುಮಾರ್


administrator