ಜೋಹಾನ್ಸ್‌ಬರ್ಗ್: ಅನುಭವಿ ಆಲ್ರೌಂಡರ್ ಜೆ.ಪಿ ಡುಮಿನಿ, ಪ್ರವಾಸಿ ಭಾರತ ವಿರುದ್ಧದ ಟಿ20 ಸರಣಿಯಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡದ ಸಾರಥ್ಯ ವಹಿಸಿದ್ದಾರೆ.
3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಫೆಬ್ರವರಿ.18ರಂದು ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯಲಿದೆ. 2ನೇ ಪಂದ್ಯ ಫೆಬ್ರವರಿ 21ರಂದು ಸೆಂಚೂರಿಯನ್‌ನಲ್ಲಿ ನಡೆಯಲಿದೆ. 3ನೇ ಪಂದ್ಯ ಫೆಬ್ರವರಿ 24ರಂದು ಕೇಪ್‌ಟೌನ್‌ನ ಆತಿಥ್ಯದಲ್ಲಿ ನಡೆಯಲಿದೆ.
ಭಾರತ ವಿರುದ್ಧದ 3 ಪಂದ್ಯಗಳ ಟಿ20 ಸರಣಿಗೆ ದಕ್ಷಿಣ ಆಫ್ರಿಕಾ ತಂಡ: ಜೆ.ಪಿ ಡುಮಿನಿ(ನಾಯಕ), ಎಬಿ ಡಿ’ವಿಲಿಯರ್ಸ್, ಜೂನಿಯರ್ ಡಾಲಾ, ಫರ್ಹಾನ್ ಬೆಹರ್ಡೀನ್, ರೀಜಾ ಹೆಂಡ್ರಿಕ್ಸ್, ಕ್ರಿಸ್ಟಿಯನ್ ಜಾಂಕರ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಡೇನ್ ಪ್ಯಾಟರ್ಸನ್, ಕ್ರಿಸ್ ಮೊರಿಸ್, ಆ್ಯರೋನ್ ಫಂಗಿಸೊ, ಆ್ಯಂಡಿಲ್ ಫೆಲುಕ್ವಾಯೊ, ಜಾನ್ ಸ್ಮಟ್ಸ್, ತಬ್ರೈಜ್ ಶಮ್ಸಿ.