ಭಾರತದ ಪಿ ವಿ ಸಿಂಧೂ ಹಾಗೂ ಸಾಯಿ ಪ್ರಣೀತ್ ಕೂಡ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯಷಿಪ್ ನ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಸಿಂಧೂ ದಕ್ಷಿಣ ಕೊರಿಯಾದ ಜಿ ಹ್ಯೂನ್ ಸಂಗ್ ವಿರುದ್ಧ ೨೧-೧೦, ೨೧-೧೮ ಅಂತರದಲ್ಲಿ ಗೆದ್ದು ಮುನ್ನಡೆದರು.
ಪುರುಷರ ಸಿಂಗಲ್ಸ್ ನಲ್ಲಿ ಸಾಯಿ ಪ್ರಣೀತ್ ೨೧-೧೩, ೨೧-೧೧ ಅಂತರದಲ್ಲಿ ಡೆನ್ಮಾರ್ಕ್ ನ ಹನ್ಸ್ ಕ್ರಿಸ್ಟಿಯನ್ ವಿಟ್ಟಿಂಗಸ್ ವಿರುದ್ಧ ಗೆದ್ದು ಅಂತಿಮ ಎಂಟರ ಹಂತ ತಲುಪಿದರು.
ಇತಿಹಾಸ ಬರೆದ ಸೈನಾವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ನಲ್ಲಿ ಸತತ ಎಂಟು ಬಾರಿ ಕ್ವಾರ್ಟರ್ ಫೈನಲ್ ತಲುಪಿದ ಜಗತ್ತಿನ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಸೈನಾ ಪಾತ್ರರಾದರು.