Tuesday, April 16, 2024

ಲಂಡನ್ ನಲ್ಲಿ ಮೊದಲ ಬಾರಿ ವಿಶ್ವಕಪ್ ಅಥ್ಲೆಟಿಕ್ಸ್

ದಿ ಸ್ಪೋರ್ಟ್ಸ್ ಬ್ಯೂರೋ
ಲಂಡನ್:ಜಾಗತಿಕ ಕ್ರೀಡಾ ಇತಿಹಾಸದಲ್ಲೇ ಮೊದಲ ಬಾರಿಗೆ ಅಥ್ಲೆಟಿಕ್ಸ್ ವಿಶ್ವಕಪ್ ಜುಲೈ 14 ರಿಂದ 15 ರವರೆಗೆ ನಡೆಯಲಿದೆ.
ಇಂಗ್ಲೆಂಡ್, ಅಮೆರಿಕ, ಪೊಲೆಂಡ್,ಚೀನಾ, ಜರ್ಮನಿ, ಫ್ರಾನ್ಸ್, ಜಮೈಕಾ ಮತ್ತು ದಕ್ಷಿಣ ಆಫ್ರಿಕಾ ಸೇರಿದಂತೆ ಎಂಟು ರಾಷ್ಟ್ರಗಳು ಎರಡು ದಿನಗಳ ಚಾಂಪಿಯನ್ ಷಿಪ್ ನಲ್ಲಿ ಪಾಲ್ಗೊಳ್ಳಲಿವೆ.

PC: Twitter/Justin Gatlin

ಕಳೆದ ವರ್ಷ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್ ಹಾಗೂ 2012ರಲ್ಲಿ ಒಲಿಂಪಿಕ್ಸ್ ಆತಿಥ್ಯ ವಹಿಸಿದ್ದ ಲಂಡನ್ ನ ಕ್ರೀಡಾಂಗಣ ಮೊದಲ ಅಥ್ಲೆಟಿಕ್ ವಿಶ್ವಕಪ್ ನ ಆತಿಥ್ಯ ವಹಿಸಲಿದೆ.
ಅಥ್ಲೆಟಿಕ್ಸ್ ವಿಭಾಗದ ಎಲ್ಲ ಸ್ಪರ್ಧೆಗಳು ನಡೆಯಲಿದ್ದು, ಒಂದು ರಾಷ್ಟ್ರದಿಂದ ಪ್ರತಿಯೊಂದು ವಿಭಾಗದಲ್ಲಿ ಒಬ್ಬ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು. ಒಟ್ಟು 12.84 ಕೋಟಿ ರೂ  ಬಹುಮಾನದ ಮೊತ್ತಕ್ಕಾಗಿ ಎಂಟು ರಾಷ್ಟ್ರಗಳು ಹೋರಾಟ ನಡೆಸಲಿವೆ. ಸ್ಪರ್ಧೆ ಹೊನಲು ಬೆಳಕಿನಲ್ಲಿ ನಡೆಯಲಿದೆ.

Related Articles